ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಯೆ ನನ್ನ ಗುರಿ:ಸಿದ್ದರಾಮಯ್ಯ…
ಮಾನ್ವಿ.: ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳನ್ನು ಅಭಿವೃದ್ಧಿ ಮಾಡುವುದೇ ನನ್ನ ಗುರಿಯಾಗಿದೆ ಎಂದು ಸಿ ಎಂ ಸಿದ್ದರಾಮಯ್ಯ ಹೇಳಿದರು.
ಮಾನ್ವಿ ಪಟ್ಟಣದ ಸೂರ್ಯ ಕನ್ವೆನ್ಸನ್ ಹಾಲ್ ಮುಂಬಾಗದ ಭವ್ಯವಾದ ವೇದಿಕೆಯಲ್ಲಿ ಮಾನ್ವಿ ಸಿರವಾರ ತಾಲೂಕಿನ ಕಾಂಗ್ರೆಸ್ ಪಕ್ಷದ ಬೃಹತ್ ಸ್ವಾಭಿಮಾನ ಸಮಾವೇಶದಲ್ಲಿ ಸಮಸಮಾಜದ ಕನಸುಗಾರ ಸಿದ್ದರಾಮಯ್ಯ ಇವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಪ್ರಾಸ್ತಾವಿಕವಾಗಿ ಸಣ್ಣ ನೀರಾವರಿ ತಂತ್ರಜ್ಞಾನ ಸಚಿವ ಎನ್ ಎನ್ ಬೋಸರಾಜ ಮಾತಾನಾಡಿ ಸಿದ್ದರಾಮಯ್ಯನವರ ಸಾಧನೆಯನ್ನು ಜನರಿಗೆ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಭವ್ಯ ವೇದಿಕೆಯಲ್ಲಿ ಮಾನ್ವಿ ಸಿರವಾರ ತಾಲೂಕಿನಲ್ಲಿ ಬಹುಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ
ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದರು. ಮಾನ್ವಿ ಕ್ಷೇತಕ್ಕೆ ಸಂಬಂಧಿಸಿದಂತೆ ಕಲ್ಕಲಾದಿಂದ ಸಿಂಧನೂರು ವರೆಗಿನ 1686 ಕೋಟಿ ವೆಚ್ಚದ
ಚತುಷ್ಪದ ರಸ್ತೆ ಕಾಮಗಾರಿ, ಪಟ್ಟಣದಲ್ಲಿ ಕೆ.ಕೆ. ಆರ್.ಡಿ.ಬಿ. ವತಿಯಿಂದ 9.5 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ.ಮಾನ್ವಿ ಮತ್ತು ಸಿರವಾರ ತಾಲೂಕಿನ ಆಯುಷನ್ ಇಲಾಖೆಯ ವಿವಿಧ ಕಟ್ಟಡಗಳ ಕಾಮಗಾರಿ ಅಂದಾಜು 4.5 ಕೋಟಿ ಕೈಗಾರಿಕ ತರಬೇತಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ 3.5 ಕೋಟಿ, ಗೃಹ ನಿರ್ಮಾಣ ಮಂಡಳಿ ವತಿಯಿಂದ ನಿರ್ಮಾಣವಾಗುವ ಮಾನ್ವಿ ಪಟ್ಟಣದ ಮಿನಿ ವಿಧಾನಸೌಧ 15 ಕೋಟಿ, ಕೆ.ಕೆ.ಆರ್.ಡಿ.ಬಿ.ಯಿಂದ ನಿರ್ಮಾಣವಾಗಲಿರುವ ಸಿರವಾರ ತಾಲೂಕಿನ ಮಿನಿ ವಿಧಾನಸೌಧ ಸೇರಿ ಇತರೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದರು ಮಾನ್ವಿ ಪಟ್ಟಣದಲ್ಲಿ ಅಂದಾಜು 1ಕೋಟಿ ವೆಚ್ಚದಲ್ಲಿ ನಿರ್ಮಾಣ ಪೂರ್ಣವಾಗಿರುವ ಮಾನ್ವಿ ತಾಲೂಕು ಪಂಚಾಯಿತಿ ನೂತನ ಕಟ್ಟಡ, ಹಾಗೂ ಪೂರ್ಣವಾಗಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳು ಸೇರಿದಂತೆ ಇತರೆ ನೂತನ ಕಟ್ಟಡಗಳನ್ನು ಉದ್ಘಾಟಿಸಿದರು.
ಸಣ್ಣ ನೀರಾವರಿ ಇಲಾಖೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟು 5 ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗಿದ್ದು ಎಲ್ಲಾ
ಕಾಮಗಾರಿಗಳು ಕೂಡ ಟೆಂಡರ್ ಹಂತದಲ್ಲಿ ಇವೆ ತಾಲೂಕಿನಲ್ಲಿ ಕುರ್ಡಿ ಗ್ರಾಮದ ಕೆರ ಅಭಿವೃದ್ಧಿಗಾಗಿ 132 ಕೋಟಿ, ಚೀಕಲಪರ್ವಿ ಗ್ರಾಮದಲ್ಲಿನ ತುಂಗಭದ್ರ ನದಿಗೆ ಬ್ರಿಜ್ ಕಂ ಬ್ಯಾರೆಜ್ ನಿರ್ಮಾಣಕ್ಕೆ ಅಂದಾಜು 396 ಕೋಟಿ, ಸಚಿವ ಡಾ.ಶರಣಪ್ರಕಾಶ ಪಾಟೀಲ್ ರವರ ಕ್ಷೇತ್ರದಲ್ಲಿ 3 ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ತಾಲೂಕಿನ ವಿವಿಧ ಚೆಕ್ ಡ್ಯಾಂಗಳ ಕೆರೆಗಳ
ನಿರ್ಮಾಣಕ್ಕೆ ಅಂದಾಜು 30 ಕೋಟಿ ವೆಚ್ಚದಲ್ಲಿ ಕರೆಯಲಾಗಿದೆ. ಸಚಿವರಾದ ಶ್ರೀ ಎನ್ ಎಸ್ ಬೋಸರಾಜ್,
ಸತೀಶ್ ಜಾರಕಿಹೊಳಿ : ಶರಣುಪಾಟೀಲ್, ಶಿವರಾಜ
ತಂಗಡಗಿ, ಕೆ ಎಚ್ ಮುನಿಯಪ್ಪ, ಶಾಸಕರಾದ ಜಿ ಹಂಪಯ್ಯ ನಾಯಕ, ಬಾದರ್ಲಿ ಹಂಪನಗೌಡ, ಶರಣೇಗೌಡ ಬಯ್ಯಪೂರು, ಬಸವನಗೌಡ ದದ್ದಲ್, ಬಸನಗೌಡ ತುರ್ವಿಹಾಳಬಸನಗೌಡ ಸಿಂಧನೂರು, ವಸಂತಕುಮಾರ.ಮಾಗಡಿ ಬಾಲಕೃಷ್ಣ, ಪುರಸಭೆ ಅಧ್ಯಕ್ಷ ಲಕ್ಷ್ಮಿ, ಅಕ್ಟರ್ ಸಾಬ್, ಎಂ ಈರಣ್ಣ, ಸೈಯಾದ್ ಖಾಲಿದ್ ಖಾದಿ, ಎ ಬಾಲಸ್ವಾಮಿ ಕೊಡ್ಲಿ, ಚಂದ್ರಶೇಖರ ಕುರ್ಡಿ, ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ..ಲಿಂಗರಾಜ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030