ಅಣ್ಣಯ್ಯ ತಾತನವರ ಪ್ರಥಮ ತುಲಾಭಾರ
ಮಾನವಿ: ತಾಲ್ಲೂಕಿನ ತಡಕಲ್ ಗ್ರಾಮದಲ್ಲಿ ಹನ್ನೊಂದು ದಿನದ ಎರಡನೇ ವರ್ಷದ ಪುರಾಣ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಜರುಗಿಸಿದರು, ಗ್ರಾಮದಲ್ಲಿ ನಡೆದ ಶ್ರೀದೇವಿ ಮಹಾತ್ಮೆ ಪುರಾಣ ಮಂಗಳೋತ್ಸವ ಇಂದು ನಡೆಯಿತು. ಪುರಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ದಾಸೋಹಸೇವೆ ಮತ್ತು ಇನ್ನಿತರ ಸೇವೆ ಸಲ್ಲಿಸಿದಂತ ಹಾಗೂ ಶ್ರೀ ಮಠಕ್ಕೆ ದೇಣಿಗೆಯನ್ನ ನೀಡಿರುವಂತ ಧಾನಿಗಳಿಗೆ ಭಕ್ತಾದಿಗಳಿಗೆ ಗೌರವ ಪೂರ್ವಕವಾಗಿ ಸನ್ಮಾನ ಮಾಡಿ ತದ ನಂತರ ಭಾಜಿ ಭಜಂತ್ರಿ ಊರಿನ ಸದ್ಭಾಕ್ತಿಗಳೊಂದಿಗೆ ಹಾಗು ಕಳಸದೊಂದಿಗೆ ಶ್ರೀ ಬನ್ನಿಮಹಾಂಕಾಳಿ ದೇವಿಗೆ ಪೂಜೆ ಮಾಡಿ , ಶ್ರೀ ಲಿಂ\\ ಅಣ್ಣಯ್ಯ ತಾತನವರ ಕತೃ ಗದ್ದುಗೆಯಲ್ಲಿ ಸುಮಂಗಲೆಯರಿಗೆ ಉಡಿ ತುಂಬೊ ಕಾರ್ಯಕ್ರಮ ಜರುಗಿತು , ಪರಮಪೂಜ್ಯ ಶ್ರೀ ಅಣ್ಣಯ್ಯ ತಾತನವರ ಭಕ್ತಾದಿಗಳಾದ ಶ್ರೀಮತಿ ಮುತ್ತಮ್ಮ ತಿಮ್ಮೇಶ ಭಜಂತ್ರಿ ಪೋತ್ನಾಳ ಹಾಗೂ ಶ್ರೀಮತಿ ದುರುಗಮ್ಮ ಹನುಮಂತಿ ಭಜಂತ್ರಿ ಪೋತ್ನಾಳ ಇವರಿಂದ ಶ್ರೀ ಪರಮಪೂಜ್ಯ ಅಣ್ಣಯ್ಯ ತಾತನವರ ಪ್ರಥಮ ತುಲಾಭಾರ ಕಾರ್ಯಕ್ರಮ ಜರುಗಿತು.ತುಲಾಭಾರ ನೇರವೇರಿಸಿಕೊಟ್ಟಂತ ಭಕ್ತಾದಿಗಳಿಗೆ ಪರಮಪೂಜ್ಯರು ಗೌರವಿಸಿ ಸನ್ಮಾನ ಮಾಡಿದರು ..ಈ ಸಂಧರ್ಭದಲ್ಲಿ ತಡಕಲ್ ಗ್ರಾಮದ ಗುರು ಹಿರಿಯರು, ಯುವಕರು, ಹಾಗೂ ಸಕಲ ಸಧ್ಬಾಕ್ತಿದಿಗಳು ಮತ್ತು ಸುತ್ತಮುತ್ತಲಿನ ಗ್ರಾಮದ ಅಣ್ಣಯ್ಯ ತಾತನವರ ಭಕ್ತಾದಿಗಳು ಭಾಗವಹಿಸಿ ಶ್ರೀ ಲಿಂ!!ಅಣ್ಣಯ್ಯ ತಾತನವರ ಕತೃ ಗದ್ದುಗೆಯ ಸನ್ನಿಧಾನದಲ್ಲಿ ನಡೆದಂತಹ ಎಲ್ಲಾ ಕಾರ್ಯಕ್ರಮಗಳನ್ನ ಅತಿ ವಿಜೃಂಭಣೆಯಿಂದ ನೆರವೇರಿಸಿದರು ..ಪರಮಪೂಜ್ಯ ಶ್ರೀ ಅಣ್ಣಯ್ಯ ತಾತನವರು ಸಕಲ ಸಧ್ಭಾಕ್ತಿದಿಗಳಿಗೆ ಆಶೀರ್ವದಿಸಿರು…
ವರದಿ, ಲಿಂಗರಾಜ್ ತಡಕಲ್, ಮಾನವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030