ಗ್ರಾಹಕರ ನೀಯತ್ತೆ ಸಹಕಾರಿಯ ಸಂಪತ್ತು ಶ್ರೀ ಮುಂಡರಗಿ ಶಿವರಾಯ ಸೌಹಾರ್ದ ಸಹಕಾರಿಗೆ 41.45 ಲಕ್ಷ ನಿವ್ವಳ ಲಾಭ: ಶ್ರೀಬಸವರಾಜ ಪಾಟೀಲ್ ವಕೀಲರು ಡೊಣಮರಡಿ…
ಮಾನವಿ:ಪಟ್ಟಣದ ಶ್ರೀ ಮುಂಡರಗಿ ಶಿವರಾಯ ಸೌಹಾರ್ದ ಸಹಕಾರಿಯ 3ನೇ ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಸಹಕಾರಿಯ ಅಧ್ಯಕ್ಷರಾದ ಶ್ರೀ ಬಸವರಾಜ ಪಾಟೀಲ್ ವಕೀಲರು ಡೊಣಮರಡಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ಸಹಕಾರಿಯು ಸದಸ್ಯರಿಗೆ ಉತ್ತಮ ಸೇವೆಯನ್ನು ಒದಗಿಸುವುದರ ಜೊತೆಗೆ ಆರ್ಥಿಕವಾಗಿ ಬೆಳೆಯಲು ಉತ್ತೇಜಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು ಶ್ರೀ ಬಸವರಾಜ ಭಜಂತ್ರಿ ನಿರ್ದೇಶಕರು ಪ್ರಾಸ್ತವಿಕವಾಗಿ ಮಾತನಾಡಿ ಸಹಕಾರಿಯು ಸಣ್ಣಪುಟ್ಟ ವ್ಯಾಪಾಸ್ಥರಿಗೂ, ಸ್ವ-ಉದ್ಯೋಗಸ್ಥರಿಗು ಆರ್ಥಿಕ ಸಹಾಯದ ಜೊತೆಗೆ ವಿವಿಧ ತರಹದ ಸೇವೆಗಳಾದ ಇ-ಸ್ಟಾಂಪ RTGS/NEFT ಮತ್ತು ಠೇವಣೆಗಳ ಮೇಲಿನ ಬಡ್ಡಿ ಇನ್ನಿತರ ಸೇವೆಗಳನ್ನು ಅತ್ಯಂತ ವೇಗವಾಗಿ ಸದಸ್ಯರ ಅವಶ್ಯಕತೆಗೆ ಅನುಗುಣವಾಗಿ ಸೇವೆಯನ್ನು ಸಲ್ಲಿಸುತ್ತದೆ. ಸಹಕಾರಿಯ ಅಧಿಕಾರಿಗಳಾದ ಶ್ರೀ ಉಮಾಕಾಂತ ವರದಿ ವಾಚಿಸಿದರು. 2023-24ನೇ ಸಾಲಿನಲ್ಲಿ ಸಹಕಾರಿಯು- 2872 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಷೇರು ಬಂಡವಾಳ 74.91 ಲಕ್ಷ ಸದಸ್ಯರಿಂದ ಠೇವಣಿಯಾಗಿ 16 ಕೋಟಿ 45 ಲಕ್ಷ, ಸದಸ್ಯರಿಗೆ ವಿವಿಧ ಉದ್ದೇಶಗಳಿಗಾಗಿ 14ಕೋಟಿ 58 ಲಕ್ಷ ಹೆಚ್ಚು ಸಾಲ ಮತ್ತು ಮುಂಗಡ ನೀಡಲಾಗಿದೆ. ಈ ಸಾಲಿನಲ್ಲಿ ಸಹಕಾರಿಯು 41.45 ಲಕ್ಷ ನಿವ್ವಳ ಲಾಭವನ್ನು ಪಡೆದಿದ್ದು ಸಹಕಾರಿಯ ಎಲ್ಲಾ ಸದಸ್ಯರಿಗೆ ಶೇ 12% ರಷ್ಟು ಡಿವಿಡೆಂಡ್ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಹಕಾರಿಯ ಉಪಾಧ್ಯಕ್ಷರಾದ ಶ್ರೀ ರಾಘವೇಂದ್ರ ರಾವ್ ತಡಕಲ್ ನಿರ್ದೇಶಕರಾದ ಶ್ರೀ ಕೆ.ದೊಡ್ಡ ಬಸ್ಸಪ್ಪ ವಕೀಲರು, ಶ್ರೀ ವಿರುಪಾಕ್ಷಪ್ಪ ಮೇಸ್ತಿ, ಶ್ರೀ ಡಾ||ಬಸವರಾಜ, ಶ್ರೀ ಶಿವರಾಜ ಗೌಡ ಉದ್ದಾಳ, ಶ್ರೀ ಮಾಳಿಂಗರಾಯ ಪಾತಪೂರು, ಹನುಮಂತರಾಯ ಮೇಟಿ ವಕೀಲರು, ಶ್ರೀ ಭರತ್ ಶೆಟ್ಟಿ, ಮಸ್ಕಿ ಸಲಹಾ ಮಂಡಳಿಯ ಸದ್ಯಸರಾದ ಶ್ರೀ ಹಳ್ಳೆಪ್ಪ ವಕೀಲರು, ಸಹಕಾರಿ ಸದಸ್ಯರಾದ ಶ್ರೀ ಹನುಮಂತ ಪೋಸ್ಟ ಡೊಣಮರಡಿ, ಮಲ್ಲಯ್ಯ ಹಾಲ್ವರ ಶ್ರೀ ಶಿವರಾಮ ಮೇಟಿ, ಶ್ರೀ ಯಮುನಪ್ಪ ದಿನ್ನಿ ಕವಿತಾಳ, ಕಾರ್ಯಕ್ರಮವನ್ನು ಸಹಕಾರಿಯ ಸಿ.ಇ.ಒ ಶ್ರೀ ಅಜೇಯಕುಮಾರ ನಿರೂಪಿಸಿದರೆ, ಸಹಕಾರಿಯ ಅಧಿಕಾರಿಗಳಾದ ಶ್ರೀ ಮಂಜುನಾಥ ಸ್ವಾಗತಿಸಿದರು ಶ್ರೀ ಸರದಾರ ವಂದಿಸಿದರು ಹಾಗೂ ಸಹಕಾರಿಯ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030