ಹಗಲು ವೇಷಧಾರಿಗಳಿಗೆ ಸನ್ಮಾನ :ಶರಣಪ್ಪ ನಾಯಕ್
ಮಾನವಿ: ತಾಲೂಕಿನ ತಡಕಲ್ ಗ್ರಾಮಕ್ಕೆ ಆಗಮಿಸಿದ ವೇಷಧಾರಿಗಳು.
ಕಲಾಪ್ರಕಾರಗಳಲ್ಲಿ ಒಂದಾದ ಹಗಲುವೇಷ ಇದೀಗ ಮೂಲೆ ಗುಂಪಾಗಲಾರಂಭಿಸಿದೆ. ಈಗಾಗಲೇ ನಗರಗಳಿಂದ ದೂರ ಸರಿದ ಹಗಲುವೇಷ ಕಲಾವಿದರು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರದರ್ಶನ ನಡೆಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ದೈವಿಕ ಕಲೆಯನ್ನು ಪ್ರದರ್ಶಿಸುವ ಮೂಲಕ ನಮ್ಮಲ್ಲಿ ಭಕ್ತಿಯ ಭಾವನೆಗಳನ್ನು ಮೂಡಿಸುವ ಅವರನ್ನು ನಾವು ಎಲ್ಲಿಯಾದರೂ ಕಂಡರೆ ದಾನ ನೀಡಿ, ಗೌರವದಿಂದ ಕಾಣೋಣ ನಮ್ಮ ಜಾನಪದ ಕಲಾ ಪ್ರಕಾರಗಳಲ್ಲಿ ಒಂದಾಗಿರುವ ಕಲೆ. ಜೀವನೋಪಾಯಕ್ಕಾಗಿ ಸ್ಥಳದಿಂದ ಸ್ಥಳಕ್ಕೆ ಅಲೆಯುವ ಅಲೆಮಾರಿ ಸಮುದಾಯದ ಹಗಲು ವೇಷ ಅಥವಾ ಬಹುರೂಪಿಗಳ ಕಲಾ ಸೇವೆ ಅನನ್ಯವಾದದ್ದು , ಗ್ರಾಮೀಣ ಭಾಗದ ಕಲೆ ನಶಿಸಿ ಹೋಗಬಾರದು ಎಂದು ,ಕಲ್ಯಾಣ ಕರ್ನಾಟಕ ವಿಭಾಗೀಯ ಕಲಾವಿದರ ಸಂಘದ ಜಿಲ್ಲಾ ಸದಸ್ಯರಾದ ಶರಣಪ್ಪ ನಾಯಕ್ ಇವರು ಕಲಾವಿದರಿಗೆ ಸನ್ಮಾನಿಸಿ ಗೌರವಿಸುವುದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030