ಜನಪದ ಕಲೆ ಉಳಿಸಿ, ಬೆಳೆಸಿ- ಶಿವಪ್ರಸಾದ್
ಮಸ್ಕಿ: ಅಳಿವಿನಂಚಿಲ್ಲಿರುವ ಜಾನಪದ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವುದು ಅವಶ್ಯಕವಾಗಿದೆ ಎಂದು ಕರ್ನಾಟಕ ಜಾನಪದ ಅಕಾಡಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಶನಿವಾರ ನಿನ್ನೊಳಗ ನೀನು ತಿಳಿದು ನೋಡಣ್ಣ ಎನ್ನುವ ಶೀರ್ಷಿಕೆ ಅಡಿಯಲ್ಲಿ ಮಸ್ಕಿ ತಾಲ್ಲೂಕು ಜಾನಪದ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಜಾನಪದ ಅಕಾಡಮಿಯಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಜಾನಪದ ಕಲೆ ಸಂಸ್ಕೃತಿ ಉಳಿಸುವ ಕೆಲಸ ನಡೆದಿದೆ ಎಂದರು. ಗ್ರಾಮೀಣ ಭಾಗದಲ್ಲಿ ಅನಕ್ಷರಸ್ಥ ಕೂಲಿ ಕಾರ್ಮಿಕರು, ಶ್ರಮ ಜೀವಿಗಳು ಜಾನಪದ ಹಾಡುಗಳನ್ನು ಕಂಠಸ್ಥ ಮಾಡಿಕೊಂಡು ಜೀವಂತವಾಗಿಟ್ಟಿದ್ದಾರೆ. ಅಂತಹ ಹಾಡುಗಳು ಶಾಲಾ ಕಾಲೇಜುಗಳಲ್ಲಿ ಪಠ್ಯವಾಗಿ ಜೀವಂತವಾಗಿಡುವ ಕೆಲಸ ನಡೆಯಬೇಕಾಗಿದೆ ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ವಿದ್ಯಾರ್ಥಿಗಳು ಮೊಬೈಲ್ ಹಾವಳಿಯಿಂದ ಪ್ರತಿಯೊಂದು ಕುಟುಂಬಗಳು ಸಂಕಷ್ಟದಲ್ಲಿವೆ. ನಮ್ಮ ಕಲೆ, ಸಾಹಿತ್ಯ, ಸಂಗೀತದ ಬಗ್ಗೆ ಅಭಿರುಚಿ ಹೆಚ್ಚಿಸಬೇಕು. ಅದಕ್ಕಾಗಿ ಅಕಾಡಮಿ, ತಜ್ಞರು ಚಿಂತನೆ ನಡೆಸಬೇಕು ಎಂದರು.
ನಂಜಲದಿನ್ನಿ, ವಲ್ಕಂದಿನ್ನಿ, ಮರಕಮದಿನ್ನಿ, ಹಸಮಕಲ್ ಕಲಾ ತಂಡಗಳು ಭಾಗವಹಿಸಿದ್ದವು. ಜಾನಪದ ಗಾಯನ, ತತ್ವಪದ, ಭಜನೆ ಪದ, ಸೋಬಾನೆ ಪದ, ಬರ‍್ರಕಥೆ ಹಾಡುಗಾರಿಕೆ ನಡೆಯಿತು. ಆಗಮಿಸಿದ್ದ ಶೋತ್ರುಗಳು ಜಾನಪದ ಕಲೆಯನ್ನು ಸಂಬ್ರಮಿಸಿದರು.
ಈ ಸಂದರ್ಭದಲ್ಲಿ ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು, ಸಾಹಿತಿ ಸಿ.ದಾನಪ್ಪ, ಉಪನ್ಯಾಸಕ ಮಾಹಂತೇಶ ಮಸ್ಕಿ, ಅಕಾಡಮಿ ಸದಸ್ಯ ರಂಗಪ್ಪ ಮಾಸ್ತಾರ್ ತಡಕಲ್ ಮಾತನಾಡಿದರು.
ಕ್ರೈಂ ಪಿಎಸ್‌ಐ ಭೀಮ ದಾಸ್, ಕಲ್ಯಾಣ ಕರ್ನಾಟಕ ಜಿಲ್ಲಾ ಸಂಚಾಲಕ ಶರಣಪ್ಪ ನಾಯಕ್ ತಡಕಲ್, ಅಮರೇಶ್ ಪೂಜಾರಿ ವಲ್ಕಮ್ ದಿನ್ನಿ, ನಿರುಪಾದಿ ನಂಜಲದಿನ್ನಿ, ಈರಪ್ಪ ಮರಕಮದಿನ್ನಿ, ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030