ಭೌತಶಾಸ್ತ್ರದಲ್ಲಿ ಇತ್ತೀಚಿನ ಪ್ರಗತಿಗಳು ಕುರಿತು ಕಾರ್ಯಾಗಾರ ಉದ್ಘಾಟನೆ…!!!

Listen to this article

ಭೌತಶಾಸ್ತ್ರದಲ್ಲಿ ಇತ್ತೀಚಿನ ಪ್ರಗತಿಗಳು ಕುರಿತು ಕಾರ್ಯಾಗಾರ ಉದ್ಘಾಟನೆ

.ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ಬೌತಶಾಸ್ತ್ರ ವಿಭಾಗವು “ಭೌತಶಾಸ್ತ್ರದಲ್ಲಿ ಇತ್ತೀಚಿನ ಪ್ರಗತಿಗಳು” ಎಂಬ ವಿಷಯದ ಮೇಲೆ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ರೂಸಾ 2.0 ಅಡಿಯಲ್ಲಿ ಹಮ್ಮಿಕೊಳ್ಳಲಾಯಿತು ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಹಾರಾಣಿ ಮಹಿಳಾ ಕಾಲೇಜು ಮೈಸೂರಿನ ಭೌತಶಾಸ್ತ್ರ ಪ್ರಾಧ್ಯಾಪಕರಾದ ಡಾ. ಶಿವಲಿಂಗಸ್ವಾಮಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಉತ್ತಮವಾದ ತಂತ್ರಜ್ಞಾನವನ್ನ ಒಳಗೊಂಡಿದೆ ಇದು ಬಾಹ್ಯಾಕಾಶದ ಗ್ರಹಗಳು ನಕ್ಷತ್ರಗಳ ಉಗಮ ಕಪ್ಪುಕುಳಿ ಕಪ್ಪು ದ್ರವ್ಯ ಕಪ್ಪು ಶಕ್ತಿಯ ಇರುವಿಕೆಯ ಬಗ್ಗೆ ಅಧ್ಯಯನ ನಡೆಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕ್ರಯೋಜನಿಕ ತಂತ್ರಜ್ಞಾನದ ಬಳಕೆಯು ಹಲವಾರು ಕ್ಷೇತ್ರಗಳಲ್ಲಿ ಪ್ರಯೋಜನಕಾರಿಯಾಗಿದ್ದು ಕ್ರಯೋಜನಿಕ ತಂತ್ರವನ್ನು ಖಗೋಳ ವಿಜ್ಞಾನದಲ್ಲಿ ವೈದ್ಯಕೀಯ ಚಿಕಿತ್ಸೆ,ಶಕ್ತಿ ಸಂರಕ್ಷಣಾ ವಿಜ್ಞಾನದಲ್ಲಿ ಹೇಗೆ ಬಳಸುತ್ತಾರೆ ಎಂದು ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ವಿದ್ಯಾರ್ಥಿಗಳಾದವರು ಇಂತಹ ಉನ್ನತ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಸಂಶೋಧನೆಯನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ನಂತರ ಹಾಸನ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರಾದ ರಘು ಎ ರವರು ಮಾತನಾಡಿ ಲೇಸರ್ ಬಳಸಿ ಅಣುಗಳ ಕುಶಲತೆ,ಸೂರ್ಯನ ವಿಕಿರಣವು ಭೂಮಿಯ ವಾತಾವರಣದಲ್ಲಿರುವ ಕಣಗಳ ಮೇಲೆ ಒಂದು ನಿರ್ದಿಷ್ಟ ಬಲವನ್ನು ಬೀರುತ್ತದೆ ಈ ಬಲವು ಬೆಳಕಿನ ಶಕ್ತಿಯನ್ನು ಅವಲಂಬಿಸಿರುತ್ತದೆ ಆದರೆ ಇದು ತರಂಗಂತರದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿಕೊಟ್ಟರು.

ನಂತರ ಕಾಲೇಜಿನ ಪ್ರಾಂಶುಪಾಲರಾದ ಡಾ: ಗುರುರಾಜ ಪ್ರಭು ಕೆ ರವರು ಮಾತನಾಡಿ ಮನುಷ್ಯ ವೈಜ್ಞಾನಿಕತೆಯ ವೃತ್ತಿ ಉಳ್ಳ ವ್ಯಕ್ತಿ. ಭಾರತದ ಸಿಂಧೂ ಕಣಿವೆ,ಈಜಿಪ್ಟ್ ಮತ್ತು ಇತರೆ ನಾಗರಿಕತೆಗಳ ಸೃಷ್ಟಿಗೆ ಇವನ ವೈಜ್ಞಾನಿಕ ಮನೋಧರ್ಮ ಕಾರಣ. ಇತಿಹಾಸ ಮತ್ತು ಭೌತಶಾಸ್ತ್ರ ಒಂದಕ್ಕೊಂದು ಸಂಬಂಧಿಸಿದ ವಿಷಯವಾಗಿವೆ. ಎಂದರು.

ಮನುಷ್ಯನ ಇತಿಹಾಸ ಆರಂಭದೊಂದಿಗೆ ವೈಜ್ಞಾನಿಕ ಸಂಶೋಧನೆ ಆವಿಸ್ಕಾರ ಅನ್ವಷಣೆಗಳ ಮೂಲಕ ನಾವು ಇಂದಿನ ಆಧುನಿಕ ತಂತ್ರಜ್ಞಾನದವರವಿಗೂ ಬಂದು ನಿಂತಿದ್ದೇವೆ ವಿದ್ಯಾರ್ಥಿಗಳಾದವರು ಇಂತಹ ಕಾರ್ಯಗಾರದಲ್ಲಿ ಹೆಚ್ಚಿನ ಜ್ಞಾನವನ್ನು ವೃದ್ಧಿಸಿಕೊಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮಧುಕೇಶ್ವರ್ ಆರ್ ಎಸ್ ರವರು , ಕಾರ್ಯಗಾರದ ಸಂಚಾಲಕಿ ಡಾ. ಹೇಮಲತಾ ಕೆ.ಸಹ ಸಂಚಾಲಕಿಯಾದ ಶ್ರೀಮತಿ ಲತಾ ಎ ಎಲ್, ಇತಿಹಾಸ ಪ್ರಾಧ್ಯಾಪಕರಾದ ಡಾ. ಕೃಷ್ಣೇಗೌಡ ಮುಂತಾದವರು ಉಪಸ್ಥಿತರಿದ್ದರು..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend