ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ದರೋಡೆ ಪ್ರಕರಣ : ವಿಜಯಪುರದ ಕೆನರಾ ಬ್ಯಾಂಕ್ ನಲ್ಲಿ 53 ಕೋಟಿ ರೂ.ಮೌಲ್ಯದ ಚಿನ್ನ ಲೂಟಿ…!!!

Listen to this article

ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ದರೋಡೆ ಪ್ರಕರಣ : ವಿಜಯಪುರದ ಕೆನರಾ ಬ್ಯಾಂಕ್ ನಲ್ಲಿ 53 ಕೋಟಿ ರೂ.ಮೌಲ್ಯದ ಚಿನ್ನ ಲೂಟಿ.!

ವಿಜಯಪುರ : ರಾಜ್ಯದಲ್ಲಿ ಮತ್ತೊಂದು ಬಹುದೊಡ್ಡ ದರೋಡೆ ಪ್ರಕರಣ ನಡೆದಿದ್ದು, ಕಳ್ಳರು ಬರೋಬ್ಬರಿ 53 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಹೌದು, ವಿಜಯಪುರ ಜಿಲ್ಲೆಯ ಮನಗೂಳಿಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ 52.26 ಕೋಟಿ ರೂ. ಮೌಲ್ಯದ 58 ಕೆಜಿ 976 ಚಿನ್ನಾಭರಣ ಮತ್ತು 5.20 ಲಕ್ಷ ನಗದು ಕಳ್ಳತನ ಮಾಡಿ ಖದೀಮರು ಪರಾರಿಯಾಗಿರುವ ಘಟನೆ ನಡೆದಿದೆ.

ಮೇ 23ರಂದೇ ಕೃತ್ಯ ಎಸಗಿರುವ ಶಂಕೆ ಇದ್ದು, ಕಳ್ಳರು ಈವರೆಗೂ ಪತ್ತೆಯಾಗಿಲ್ಲ. ಇದು ಚಿನ್ನದ ಮೌಲ್ಯದ ರೂಪದಲ್ಲಿ ರಾಜ್ಯದಲ್ಲಿ ಯೇ ಅತಿ ದೊಡ್ಡ ಬ್ಯಾಂಕ್ ಕಳ್ಳತನ ಎನ್ನಲಾಗುತ್ತಿದೆ. ಈ ಸಂಬಂಧ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಕಲ್ಮೇಶ್ ಪೂಜಾರಿಯವರು ಮನ ಗೂಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮೇ 23ರ ಸಂಜೆ 6 ಗಂಟೆಯಿಂದ 25ರ ಬೆಳಗ್ಗೆ 11.30ರ ಅವಧಿಯಲ್ಲಿ ಕೃತ್ಯ ಎಸಗಿರುವ ಶಂಕೆ ಇದೆ. ಕಳ್ಳರ ಪತ್ತೆಗೆ ಎಂಟು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ…

ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend