ಕಂಕಣವಾಡಿ ಪಟ್ಟಣ ಪಂಚಾಯತ್ ರಾಷ್ಟ್ರಿಯ ಹೆದ್ದಾರಿಯ ಪಕ್ಕದಲ್ಲಿ ಇದ್ದರೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯವಿಲ್ಲದ ಪಟ್ಟಣ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕು ಕಂಕಣವಾಡಿ ಪಟ್ಟಣವು 2,0000 ಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಈ ಪಟ್ಟಣಕ್ಕೆ ಸಿಗದ ಮೂಲ ಸೌಕರ್ಯಗಳ ದೌರ್ಬಾಗ್ಯಹೌದು ಸ್ನೇಹಿತರೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣವು ಸರಿಸುಮಾರು 12500 ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವಂತಹ ಪಟ್ಟಣವಾಗಿದೆ ಆದರೆ ಈ ಪಟ್ಟಣದಲ್ಲಿ ಮಹಿಳೆಯರಿಗೆ ಆಗಲಿ ವಿದ್ಯಾರ್ಥಿಗಳಿಗಾಗಲಿ ಯಾವುದೇ ರೀತಿಯ ಮೂಲಸೌಕರ್ಯಗಳು ಇರುವುದಿಲ್ಲ ಮುಖ್ಯವಾಗಿ ಬಸ್ ನಿಲ್ದಾಣ ಇದ್ದರೂ ಪ್ರಯಾಣಿಕರಿಗೆ ತಂಗಲು ಯೋಗ್ಯವಲ್ಲ ಇದ್ದರೂ ಕೂಡ ಮಧ್ಯ ಮಾರಾಟ ಮಳಿಗೆ ಎದುರಿಗೆ ಇದೆ ಆದ್ದರಿಂದ ಬಸ್ ನಿಲ್ದಾಣ ಇದ್ದರೂ ಕೂಡ ಮಹಿಳೆಯರಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಯಾವ ಸುರಕ್ಷತೆ ಇಲ್ಲದಂತಾಗಿದೆ.
ಸರ್ಕಾರದಿಂದ ಮಂಜೂರಾದಂತಹ ಬಸ್ ನಿಲ್ದಾಣ ಓಂ ನಮಃ ಶಿವಾಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಂಜೂರಾದಂತಹ ಸಮುದಾಯ ಆರೋಗ್ಯ ಕೇಂದ್ರವನ್ನು ಗುಳುಂ ಮಾಡಲಾಗಿದೆ ಮತ್ತು ವಿದ್ಯುತ್ ಇಲಾಕೆಯಿಂದ ಮಂಜೂರಾದ ಹೆಸ್ಕಾಂ ಉಪವಿಭಾಗ ಕಚೇರಿ ಸ್ವಾಹ ಈ ರೀತಿಯಾಗಿ ಪಟ್ಟಣದಲ್ಲಿ ಇನ್ನೂವರೆಗೂ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಆಗಿಯೇ ಇಲ್ಲ ಕಾರಣ ಕರ್ನಾಟಕ ನೀರಾವರಿ ನಿಗಮ ನಿಯಮಿತ ಉಪ ವಿಭಾಗ ಕಚೇರಿ ಕಂಕಣವಾಡಿ ಇವರು ಜಾಗವನ್ನು ನೀಡದೆ ಇರಲು ಕಾರಣ ಅದೇ ರೀತಿಯಾಗಿ ಕರ್ನಾಟಕ ರಾಜ್ಯ ಸರ್ಕಾರವು ಮಂಜೂರು ಮಾಡಿರುವಂತಹ ಇಂದಿರಾ ಕ್ಯಾಂಟೀನಲ್ಲಿ ಅದು ಸಹ ಸರಿಯಾದ ಸ್ಥಳದಲ್ಲಿ ನಿರ್ಮಿಸಿಲ್ಲ ಮಹಿಳೆಯರು ಸುಲಭ ಶೌಚಾಲಯದ ಪಕ್ಕದಲ್ಲಿ ಅಂದರೆ ಸುಲಭ ಶೌಚಾಲಯಕ್ಕೆ ಹೋಗುವ ದಾರಿಗೆ ಹೊಂದಿಕೊಂಡ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ.
ಅಂದರೆ ಮುಂದೆ ಉನ್ನಮ್ ಹಿಂದೆ ಇಡಮ್ ಎನ್ನುವ ಹಾಗೆ ಆಗಿದೆ ಮಾಡಿರುವ ಕಾಮಗಾರಿಯಲ್ಲಿ ಅದರಲ್ಲೂ ಸುಲಭ ಶೌಚಾಲಯಗಳನ್ನು ನಿರ್ಮಾಣ ಮಾಡಿರುವ ಕಾಮಗಾರಿಯು ಯಾವುದೇ ರೀತಿ ಮಹಿಳೆಯರಿಗೆ ಹೆಣ್ಣು ಮಕ್ಕಳಿಗೆ ಉಪಯೋಗವಾಗುತ್ತಿಲ್ಲ ಹಾಗೂ ಈ ಜಾಗವನ್ನು ಸಾರ್ವಜನಿಕರು ಅತಿಕ್ರಮಣ ಮಾಡಿಕೊಂಡಿರುವುದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಇಲಾಖೆಗೆ ಸಂಬಂಧಿಸಿದ 33 ಎಕ್ಕರೆ ಜಾಗವು ಕರ್ನಾಟಕ ನೀರಾವರಿ ಇಲಾಖೆ ಹೊಂದಿರುತ್ತದೆ ಹಾಗೂ ಪಟ್ಟಣ ಪಂಚಾಯತ್ ಅಥವಾ ಸರಕಾರಿ ಜಾಗ ಸರ್ವೇ ನಂ 3 /1 ರಲ್ಲಿ ಎರಡು ಎಕರೆ 22 ಗುಂಟೆಯು ಸರ್ಕಾರಿ ಜಾಗ ಸರ್ವೆ ನಂಬರ್ 94 /ಬಿ 2 ರಲ್ಲಿ 38 ಗುಂಟೆ ಸರ್ವೆ ನಂಬರ್ 94/ಅ 27 ಗುಂಟೆ ಸರ್ಕಾರಿ ಜಾಗ ಹೊಂದಿರುತ್ತದೆ ಆದರೆ ಅವರಿಗೆ ಎಷ್ಟು ಬೇಕೋ ಅಷ್ಟೇ ಅಂದರೆ ಐದು ಎಕರೆಯವರಿಗೆ ಮಾತ್ರ ಅವರು ತಮ್ಮ ಬೌಂಡರಿಯನ್ನು ಹಾಕಿಕೊಂಡಿರುತ್ತಾರೆ ಇನ್ನುಳಿದ ಜಾಗವನ್ನು ಸಾರ್ವಜನಿಕರು ಅತಿಕ್ರಮಣ ಮಾಡಿರುತ್ತಾರೆ ಈ ಅತಿಕ್ರಮಣದಿಂದ ಸರ್ವ ಮಾಡಿರುವಂತಹ ಜಾಗವನ್ನು ವಶಪಡಿಸಿಕೊಂಡು ಆಸ್ಪತ್ರೆ ಬಸ್ ನಿಲ್ದಾಣ ಪೊಲೀಸ್ ಠಾಣೆ ಹೆಸ್ಕಾಂ ಕಚೇರಿಗಳನ್ನು ನಿರ್ಮಾಣ ಮಾಡಬಹುದಾಗಿತ್ತುಆದರೆ ಯಾವ ಅಧಿಕಾರಿಗಳು ಮತ್ತು ಚುನಾಯಿತ ಜನ ಪ್ರತಿನಿಧಿಗಳು ಆಸಕ್ತಿ ತೋರದ ರಾಠೋಡ್ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಕಂಕಣವಾಡಿ ಒಟ್ಟಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು.
ಶ್ರೀಹಾಲಸಿದ್ದೇಶ್ವರ ವೈನ್ ಶಾಪ್ ಎಂಬ ಮಧ್ಯದ ಅಂಗಡಿ ಇರುವುದು ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ 10 ಗಜಗಳ ಅಂತರ ಕೂಡ ಇಲ್ಲ ಅದಲ್ಲದೆ 25ರಿಂದ 30 ಗಜಗಳ ಅಂತರದಡಿಯಲ್ಲಿ ಶ್ರೀ ವಿಠ್ಠಲ ಮಂದಿರ ಹಾಗೂ ಶ್ರೀ ಸದಾಶಿವ ಮಂದಿರ ಇರುತ್ತದೆ ಆದರೂ ಕೂಡ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇರೋದು ವಿಷಾದನೀಯ ಆದಕಾರಣ ಸರಕಾರ ಈ ಕುರಿತು ಕೂಲಂಕುಶವಾಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಹಾಗೂ ತ್ವರಿತ ಗತಿಯಲ್ಲಿ ಬಸ್ ನಿಲ್ದಾಣ ಹತ್ತಿರ ಇರುವ ಮಧ್ಯದ ಅಂಗಡಿಯನ್ನು ಸ್ಥಳಾಂತರ ಮಾಡಬೇಕಾಗಿ ಈ ಮೂಲಕ ನಮ್ಮ ದಿನ ಪತ್ರಿಕೆ ವಿಜಯನಗರ ಸಾಮ್ರಾಜ್ಯಗೆ ಅಲ್ಲಿನ ಮಹಿಳೆಯಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ…
ವರದಿ : ಮಹಾಲಿಂಗ ಎಚ್ ಗಗ್ಗರಿ ಜಿಲ್ಲಾ ವರದಿಗಾರರು ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030