ಬೆಳಗಾವಿಯಲ್ಲಿ ನಡೆಯಲಿರುವ,
1924 ರ ಕಾಂಗ್ರೆಸ್ ಅಧಿವೇಶನದ
ಶತಮಾನೋತ್ಸವ ಕಾರ್ಯಕ್ರಮದಲ್ಲಿ
ಹುಯಿಲಗೋಳ ನಾರಾಯಣರಾಯರ
ರಚಿತ ” ಉದಯವಾಗಲಿ ನಮ್ಮ ಚೆಲುವ
ಕನ್ನಡ ನಾಡು” ಗೀತೆಯನ್ನು ಸ್ವಾಗತ
ಗೀತೆಯಾಗಿ ಅಳವಡಿಸಬೇಕೆಂದು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಶತಮಾನೋತ್ಸವ
ಸಮಿತಿಯ ಅಧ್ಯಕ್ಷ ,ಕಾನೂನು ಸಚಿವ
ಶ್ರೀ ಎಚ್.ಕೆ.ಪಾಟೀಲ ಅವರಿಗೆ ಇಂದು
ಪತ್ರ ಬರೆದಿರುವ ಕ್ರಿಯಾ ಸಮಿತಿ ಅಧ್ಯಕ್ಷ
ಅಶೋಕ ಚಂದರಗಿ,1924 ರಲ್ಲಿ
ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ
ಅವರ ಅಧ್ಯಕ್ಷತೆಯಲ್ಲಿ ನಡೆದ 39 ನೇ
ಕಾಂಗ್ರೆಸ್ ಅಧಿವೇಶನದಲ್ಲಿ ಖ್ಯಾತ
ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ
ಹಾನಗಲ್ಲ ಅವರು ಹನ್ನೊಂದು ವರ್ಷದ
ಬಾಲಕಿಯಿದ್ದಾಗಲೇ ಈ ಗೀತೆಯನ್ನು
ಹಾಡಿದ್ದನ್ನು ನೆನಪಿಸಿದ್ದಾರೆ.
ಹುಯಿಲಗೋಳ ರ ಮತ್ತು
ಗಂಗೂಬಾಯಿ ಹಾನಗಲ್ಲರ ಭಾವಚಿತ್ರಗಳನ್ನು
ಬಳಸಿಕೊಂಡು ಕೃತಕ ಬುದ್ಧಿಮತ್ತೆ
ತಂತ್ರಙ್ಞಾನದ ಮೂಲಕ ಅವರೇ
ಹಾಡಿದಂತೆ ಮಾಡಿದರೆ ಹೆಚ್ಚು
ಪರಿಣಾಮಕಾರಿಯಾಗುತ್ತದೆಯೆಂದು
ಕ್ರಿಯಾ ಸಮಿತಿಯು ಬರೆದ ಪತ್ರದಲ್ಲಿ
ಬರೆಯಲಾಗಿದೆ.
ಶತಮಾನೋತ್ಸವ ಕಾರ್ಯಕ್ರಮದ
ಉಸ್ತುವಾರಿ ನೋಡಿಕೊಳ್ಳುತ್ತಿರುವ
ಬೆಳಗಾವಿ ಜಿಲ್ಲಾಧಿಕಾರಿಗಳಿಗೂ ಈ
ಪತ್ರವನ್ನು ಕಳಿಸಲಾಗಿದೆ…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030