ಹಂದಿಗುಂದ ಗ್ರಾಮ ಪಂಚಾಯತನಲ್ಲಿ ಇಂದು ಮನೆ ಮನೆಗೆ ತೆರಿಗೆ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಹಂದಿಗುಂದ ಗ್ರಾಮ ಪಂಚಾಯತ್ ಕಾರ್ಯಾಲಯ ಇಂದು ಗ್ರಾಮದಲ್ಲಿ ತೆರಿಗೆ ವಸೂಲಾತಿ ಅಭಿಯಾನ ಹಮ್ಮಿಕೊಂಡಿದ್ದು ಅದರಂತೆ ಸಮಸ್ತ ಗ್ರಾಮಸ್ಥರು ಗ್ರಾಮ ಪಂಚಾಯತಗೆ ಪಾವತಿಸಲು ಬಾಕಿ ಇರುವ ಕಟ್ಟಡ ತೆರಿಗೆ, ಭೂಮಿ ತೆರಿಗೆ, ನೀರಿನ ತೆರಿಗೆ ಹಾಗೂ ಇನ್ನಿತರ ತೆರಿಗೆ ಪಾವತಿಸಲು ಈ ಮೂಲಕ ಕೋರಲಾಗಿದೆ.
ಗ್ರಾಮ ಅಭಿವೃದ್ಧಿ ಹೊಂದಲು ಬಾಕಿ ಉಳಿದ ತೆರಿಗೆಯನ್ನು ಇಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ದಿಲಾವರ್ ಸಾಹೇಬ್ರು ಮತ್ತು ಪಂಚಾಯತ್ ಸಿಬ್ಬಂದಿಳಾದ ಕಾರ್ಯದರ್ಶಿ ಹಾಗೂ ಎಲ್ಲ ಸಿಬ್ಬಂದಿಗಳು ಗ್ರಾಮದ ಎಲ್ಲ ಮನೆ ಮನೆಗೆ ತೇರಳಿ ಜನರಿಗೆ ತೆರಿಗೆ ಪಾವತಿಸಲು ತಿಳಿಸಿದರು ಈ ಸಂದರ್ಭದಲ್ಲಿ ಅನೇಕ ಜನರು ತೆರಿಗೆ ಪಾವತಿಸಿದ್ದಾರೆ.ಈ ಅಭಿಯಾನದಲ್ಲಿ
ಗ್ರಾಮದ ಮಹಿಳೆಯರು ಭಾಗವಹಿಸಿದ್ದರು.
ವರದಿ : ಮಹಾಲಿಂಗ ಎಚ್ ಗಗ್ಗರಿ ಜಿಲ್ಲಾವರದಿಗಾರರು ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030