ಮೂಡಲಗಿ : ಶಕ್ತಿ ಯೋಜನೆ ಪರಿಣಾಮ ದಟ್ಟಣೆ ಹೆಚ್ಚುತ್ತಿದ್ದು, ಶಾಲಾ ಕಾಲೇಜಿಗೆ ತೆರಳುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಸ್ ಬಾಗಿಲ್ ಬಳಿ ಜೋತಾಡುವಂತಾ ಪರಿಸ್ಥಿತಿ ಪ್ರತಿನಿತ್ಯ ಸಹಜವಾಗಿದೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ
ಸೋಮವಾರದಂದು ಪಟ್ಟಣದ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ 1:45 ವೇಳೆ ಬೆಳಗಾವಿ-ವಿಜಯಪೂರ ಬಸ್ ಆಗಮಿಸಿದ ಸಂದರ್ಭದಲ್ಲಿ ಜನದಟ್ಟನೆ ಹೆಚ್ಚಾಗಿ ಬಸ್ ಗಾಗಿ ಕಾಯುತ್ತಾ ನಿಂತಿರುವ ಸಂದರ್ಭದಲ್ಲಿ ಕು ಯಶೋಧಳ ಎರಡು ಪಾದಗಳ ಮೇಲೆ ಬೆಳಗಾವಿ -ಗೋಕಾಕ್ -ವಿಜಯಪುರ ಬಸ್ ದಿನಾಂಕ 25/11/2024 ರಂದು ಸೋಮವಾರ ದಿವಸ ಮೂಡಲಗಿ ಬಸ್ ಗಾಗಿ ಕಾಯುತಿರುವೆ ವಿದ್ಯಾರ್ಥಿಯ ಮೇಲೆ ಚಾಲಕ ಹಾಯಿಸಿ ಬಾರಿ ಗಂಬಿರವಾಗಿ ಗಾಯಗೊಳಿಸಿ ಅಪಘಾತ ಪಡಿಸಿರುತ್ತಾನೆ.
ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ವಿದ್ಯಾರ್ಥಿನಿ ಯಶೋಧ ಕೆಂಪಣ್ಣ ಗಗ್ಗರಿ(21) ಎಂಬಾತಳ ಎರಡು ಪಾದದ ಮೇಲೆ ಬಸ್ ಹರಿದು ಗಂಭೀರ ಗಾಯವಾಗಿ ಹಾರೂಗೇರಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ವಿದ್ಯಾರ್ಥಿನಿಯ ಚಿಕ್ಕಪ್ಪನಾದ ಮಹಾಲಿಂಗ ಹಣಮಂತ ಗಗ್ಗರಿ ಮೂಡಲಗಿ ಪೊಲೀಸ್ ಠಾಣಾಯಲ್ಲಿ ದಿನಾಂಕ 26/11/2024 ರಂದು ದೂರು ನೀಡಿದ್ದು, ಪೊಲೀಸ್ ಠಾಣೆಯ ಅಧಿಕಾರಿಗಳು KA 23 F 1159 ಬಸ್ ನ ಚಾಲಕರಾದ ಹಣಮಂತ ಕೃಷ್ಣಪ್ಪ ಬಂದಿವಡ್ಡರ ಮೇಲೆ ಎಫ್ ಆರ್ ಐ ದಾಖಲಿಸಿದ್ದಾರೆ…
ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030