ವಿಷಯ : ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಅಥಣಿ ಜಿಲ್ಲೆ ಹಾರೂಗೇರಿ ತಾಲ್ಲೂಕಿನ ಪಾರಮಾನಂದವಾಡಿ ವಲಯದಲ್ಲಿ ತಾಲ್ಲೂಕು ಮಟ್ಟದ ಜ್ಞಾನವಿಕಾಸ ಕಾರ್ಯಕ್ರಮದಡಿ ಮಹಿಳಾ ವಿಚಾರಗೋಷ್ಠಿ ಮತ್ತು ಸಮಾವೇಶ ಕಾರ್ಯಕ್ರಮ ನಡೆಸಲಾಗಿದ್ದು,
ಕಾರ್ಯಕ್ರಮ ಉದ್ಘಾಟನೆಯನ್ನು ಮಾನ್ಯ ಜಿಲ್ಲಾ ನಿರ್ದೇಶಕರು ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯತಿ ಸದಸ್ಯರಾದ ಶ್ರೀ ಸಾತಪ್ಪ ಮುತ್ತಪ್ಪ ಅಂಬಿ ಅವರು ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ :ಶ್ರೀ ಮಾತೊಶ್ರೀ ಕಾವ್ಯಶ್ರೀ ಅಮ್ಮನವರು ಇವರು ಕುಟುಂಬ ದಲ್ಲಿ ಮಹಿಳೆಯರು ಪಾತ್ರ ಮತ್ತು ಸಂಸ್ಕೃತಿ ಸಂಸ್ಕಾರ ಬೆಳೆಸುವಲ್ಲಿ ಮಹಿಳೆಯರು ಪಾತ್ರ ಈ ವಿಷಯದ ಕುರಿತಾಗಿ ಉಪನ್ಯಾಸ ನೀಡಿದರು.
ಹಾಗೂ ಅಥಣಿ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ಹೆಗಡೆ ಅವರು ಜ್ಞಾನ ವಿಕಾಸ್ ಕಾರ್ಯಕ್ರಮ ಅಧ್ಯಕ್ಷರಾದ ಮಾತೃಶ್ರಿ ಅಮ್ಮನವರ ಪರಿಚಯ ಧರ್ಮಸ್ಥಳ ಯೋಜನೆಯಲ್ಲಿ ನಡೆಯುವಂತಹ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿಯನ್ನು ನೀಡಿ ಸಮಾಜ ಮತ್ತು ಕುಟುಂಬ ದಲ್ಲಿ ಮಹಿಳೆಯರ ಪಾತ್ರ ಕುರಿತು ಮಾಹಿತಿ ನೀಡಿದರು. ಹಾಗೆ ಸದಸ್ಯರಲ್ಲಿ ಸ್ವ ಉದ್ಯೋಗ ಮತ್ತು ಉದ್ಯೋಗದ ಅವಕಾಶ ಇರುವ ಬಗ್ಗೆ ಸದಸ್ಯರಲ್ಲಿನ ಆತ್ಮ ಸ್ಥೈರ್ಯ ತುಂಬುವ ಬಗ್ಗೆ ಮಾಹಿತಿ ನೀಡಿದರು.ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ಮೋಹನ ಕೆ ರವರು ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಈ ವಂದು ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾದ ಈರಣ್ಣ , ಸಿ ಎಸ್ ಸಿ ಸೇವಾದಾರರು,ಜ್ಞಾನ ವಿಕಾಸ್ ಕೇಂದ್ರದ ಸಂಯೋಜಕೀಯರು, ಜ್ಞಾನವಿಕಾಸ ಕೇಂದ್ರಗಳ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.ಮೇಲ್ವಿಚಾರಕರಾದ ಗುರುನಾಥ ಉಳಾಗಡ್ಡಿ ಅವರು ವಂದಿಸಿದರು, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸುರೇಖಾ ಕೋಳಿ ಅವರು ನಿರೂಪಣೆ ಮಾಡಿದರು…
ವರದಿ, ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030