ಲೋಕಾಯುಕ್ತ ದಾಳಿ.. ಅಧಿಕಾರಿ ತಿಪ್ಪೆಸ್ವಾಮಿ ನಿವಾಸದಲ್ಲಿ ರಾಶಿ ರಾಶಿ ಚಿನ್ನಾಭರಣ..!
ಬೆಂಗಳೂರು: ಕಳಂಕಿತ ಭ್ರಷ್ಟ ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಾಲ್ವರು ಅಧಿಕಾರಿಗಳ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಕ್ಕೆ ದಾಳಿ ನಡೆದಿದೆ.
ಬೆಂಗಳೂರಿನ ಟೌನ್ ಅಂಡ್ ಫ್ಲಾನಿಂಗ್ ಡೈರೆಕ್ಟರ್ ತಿಪ್ಪೇಸ್ವಾಮಿ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗಿರಿನಗರದ 4ನೇ ಫೇಸ್ ವಿಶ್ವೇಶ್ವರಯ್ಯ ರಸ್ತೆ ಬಳಿಯಿರುವ ಬಂಗಲೆ ಮೇಲೆ ಎಸ್.ಪಿ.ಶ್ರೀನಾಥ್ ಜೋಷಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಬೆಳಗ್ಗೆ 7 ಗಂಟೆಗೆ ಮನೆಗೆ ದೌಡಾಯಿಸಿ, ದಾಖಲೆಗಳನ್ನು ಪರಿಶೀಲನೆ ಮಾಡ್ತಿದ್ದಾರೆ. ತಪಾಸಣೆ ವೇಳೆ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ಪತ್ತೆಯಾಗಿದೆ. ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ಅವುಗಳ ಮೌಲ್ಯಮಾಪನ ಮಾಲು ಅಕ್ಕಸಾಲಿಗರನ್ನು ಕರೆಸಿದ್ದಾರೆ. ದಾಳಿ ವೇಳೆ ತಿಪ್ಪೇಸ್ವಾಮಿ ಮಗಳು ಕಾಲೇಜಿಗೆ ಹೋಗಲು ಸಿದ್ಧರಾಗಿದ್ದರು. ಆಗ ಅವರ ಕಾಲೇಜು ಬ್ಯಾಗ್ ಪರಿಶೀಲನೆ ಮಾಡಿ, ಸ್ಕೂಟರ್ ರೀಡಿಂಗ್ ಮೀಟರ್ ಫೋಟೋ ತೆಗೆದು ಹೊರಗಡೆ ಕಳುಹಿಸಿಕೊಟ್ಟಿದ್ದಾರೆ…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030