ಬೆಳಗಾವಿಯಲ್ಲಿ ಬೆಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ
ಬೆಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳ ಶಾಕ್ ಬೆಳಗಾವಿಯ ಮೂರು ಕಡೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು.
ಬೆಂಗಳೂರಿನ ಕಮರ್ಷಿಯಲ್ ಟ್ಯಾಕ್ಸ್ ಎಸಿ ಆಗಿರುವ ವೆಂಕಟೇಶ ಮಜುಂದಾರ್ ಮೇಲೆ ದಾಳಿ ಈ ಮೊದಲು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದ್ದ ವೆಂಕಟೇಶ ಮಜುಂದಾರ್ ಆಗ ಬೆಳಗಾವಿಯಲ್ಲೂ ಮನೆ ಖರೀದಿಸಿದ್ದ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ದಾಳಿ.
ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಶಿವಪ್ಪ ಡವಳೇಶ್ವರ ಮನೆ ಮೇಲೂ ದಾಳಿ ಈ ಹಿಂದೆ ಬೆಳಗಾವಿಯಿಂದ ಬಾಗಲಕೋಟೆಗೆ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದ ವಿಠ್ಠಲ 1 ಕೋಟಿ 10 ಲಕ್ಷ ಹಣ ಸಂಗ್ರಹಿಸುವ ವೇಳೆ ರಾಮದುರ್ಗ ಚೆಕ್‌ಪೋಸ್ಟ್ ಅಧಿಕಾರಿಗಳ ದಾಳಿ.
ಈ ಹಿನ್ನೆಲೆಯಲ್ಲಿ ಗ್ರಾಮಲೆಕ್ಕಾಧಿಕಾರಿ ವಿಠ್ಠಲ ಮನೆ, ಕಚೇರಿ ಮೇಲೂ ದಾಳಿ ವಿಠ್ಠಲ ಇರುವ ನಿಪ್ಪಾಣಿಯ ಬಾಡಿಗೆ ಮನೆಯಲ್ಲಿ ಹಣ ಸಿಕ್ಕಿರುವ ಮಾಹಿತಿ
ಧಾರವಾಡದ ಕೆಐಡಿಬಿ ಎಇಇ ಗೋವಿಂದಪ್ಪ ಭಜಂತ್ರಿ ಮನೆ ಮೇಲೂ ದಾಳಿ ಸವದತ್ತಿ ತಾಲೂಕಿನ ಉಗರಗೋಳದಲ್ಲಿ ಫಾರ್ಮ್‌ಹೌಸ್ ಹೊಂದಿರುವ ಗೋವಿಂದಪ್ಪ ಈ ಕಾರಣಕ್ಕೆ ಧಾರವಾಡ ಜೊತೆಗೆ ಫಾರ್ಮ್‌ಹೌಸ್ ಮೇಲೂ ದಾಳಿ ನಡೆಸಿದ ಅಧಿಕಾರಿಗಳು
ಬೆಳಗಾವಿ ಲೋಕಾಯುಕ್ತ ಎಸ್‌ಪಿ ಹಣಮಂತರಾಯ ನೇತೃತ್ವದಲ್ಲಿ ಎಲ್ಲೆಡೆ ದಾಳಿ ನಡೆದಿದೆ….
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030