ಹಸಿದವರ ಹೊಟ್ಟೆ ತುಂಬಿಸಲು, ಹೋಗಿ ಅಪಘಾತದಲ್ಲಿ ಪ್ರಾಣತೆತ್ತ ಯುವಕರು…!!!

 

ವರದಿ. ನಳಿನಿ ಬೆಂಗಳೂರು

ಸಿಲಿಕಾನ್​ ಸಿಟಿಯಲ್ಲಿ ಹಿಟ್​ ಆಯಂಡ್​ ರನ್​ಗೆ ಯುವಕರಿಬ್ಬರು ಬಲಿಯಾಗಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಅಪಘಾತದ ದೃಶ್ಯ ನೋಡಿದ್ರೆ ಎಂಥವರ ಎದೆಯು ಒಂದು ಕ್ಷಣ ಝಲ್ ಎನ್ನುವಂತಿದೆ.

ಗೌತಮ್ ಮತ್ತು ಶ್ರೀಕಾಂತ ಮೃತ ಯುವಕರು. ಇವರು ಮಂಜುನಾಥ್​ ನಗರದ ನಿವಾಸಿಗಳು. ಸ್ವಿಗ್ಗಿ ಡೆಲಿವರಿ ಬಾಯ್​​ಗಳಾಗಿ ಕೆಲಸ ಮಾಡುತ್ತಿದ್ದರು. ನಗರದ ಜಾಲಹಳ್ಳಿ ವಿಲೇಜ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ನಿನ್ನೆ (ಮಂಗಳವಾರ) ತಡರಾತ್ರಿ ಜಾಲಹಳ್ಳಿ ವಿಲೇಜ್ ರಸ್ತೆಯ ಅಪಾರ್ಟ್ಮೆಂಟ್​ನಲ್ಲಿ ಊಟ ಡೆಲಿವರಿ ಕೊಡಲು ಹೋಗಿದ್ದರು.

 

ಡೆಲಿವರಿ ಕೊಟ್ಟು ವಾಪಸ್ ಬೈಕ್ ಮೇಲೆ ಬಂದು ಕುಳಿತಿದ್ದರು.ಬಳಿಕ ಅಲ್ಲಿಂದ ಹೊರಟ ಕೆಲವೇ ಸೆಕೆಂಡ್​ಗಳಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಕಾರು ನೋಡು ನೋಡುತ್ತಿದ್ದಂತೆ ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೇಲಕ್ಕೆ ಹಾರಿ ಬಿದ್ದ ಯುವಕರಿಬ್ಬರ ಪ್ರಾಣವು ಸಹ ಹಾರಿ ಹೋಗಿದೆ.ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್​ ಎನಿಸುವಂತಿದೆ. ಘಟನೆ ಸಂಬಂಧ ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *