ಕರ್ನಾಟಕ ಪ್ರದೇಶ ಕಾಂಗ್ರೆಸ್, ಐಎನ್ ಬಿಸಿ ಡಬ್ಲ್ಯೂ ಎಫ್. ವತಿಯಿಂದ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ರಾಜ್ಯ ಮಹಿಳಾ ಕಾರ್ಯಕರ್ತರ ಕಾರ್ಯಕಾರಿಣಿ ಸಭೆ ಕರೆಯಲಾಯಿತು “”
ಹಾಗೂ ಐಎನ್‌ಬಿಸಿಡಬ್ಲ್ಯೂ ಎಫ್, ನ ನೂತನವಾಗಿ ಮಹಿಳಾ ಅಧ್ಯಕ್ಷರನ್ನಾಗಿ ಸಂಗೀತ ನಾಡಗೌಡರನ್ನು ನೇಮಕ ಮಾಡಲಾಯಿತು.
ಕಾರ್ಯಕ್ರಮದ ಕೇಂದ್ರಬಿಂದುವಾದ . ಕೆಪಿಸಿಸಿ ರಾಜ್ಯ ಮಹಿಳಾ ಅಧ್ಯಕ್ಷರಾದ ಸೌಮ್ಯ ರೆಡ್ಡಿ. ರವರಿಂದ ಶ್ರೀಮತಿ ಸಂಗೀತ ನಾಡಗೌಡ ರವರಿಗೆ ಆದೇಶ ಪತ್ರ ವಿತರಿಸಿ ಸನ್ಮಾನಿಸಲಾಯಿತು.
ಶ್ರೀಮತಿ ಸಂಗೀತ ನಾಡಗೌಡರವರು ಆದೇಶ ಪತ್ರ ಪಡೆದ ನಂತರ . ನನಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಪ್ರಾಮಾಣಿಕವಾಗಿ ಸಂವಿಧಾನಬದ್ಧವಾಗಿ ನಿರ್ವಹಿಸಿಕೊಂಡು ಹೋಗುತ್ತೇನೆಂದು
ಹಾಗೂ ಈ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೆ ಹೋಗಿ ಕಟ್ಟಕಡೆಯ ಕಡು ಬಡವರಿಗೆ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡುತ್ತೇನೆಂದು,
ಸ್ಪೂರ್ತಿದಾಯಕವಾದ ಮಾತುಗಳನ್ನು ಮಾತನಾಡಿದರು ಹಾಗೂ ಇದೇ ಸಂದರ್ಭದಲ್ಲಿ ಶ್ರೀಮತಿ ಶರಣಮ್ಮ. ಹ. ದೊಡ್ಮನೆ ಇವರನ್ನು ಕೂಡ ರಾಜ್ಯ ಮಹಿಳಾ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು ಹಾಗೂ ಅವರಿಗೂ ಕೂಡ
ಆದೇಶ ಪತ್ರವನ್ನು ವಿತರಿಸಲಾಯಿತು ಮತ್ತು ಇದೇ ಸಂದರ್ಭದಲ್ಲಿ ಹೈಎನ್‌ಬಿಸಿಡಬ್ಲ್ಯೂಎಫ್ ನ. ರಾಜ್ಯದ್ಯಕ್ಷರಾದ. ಜಿ ಆರ್ ದಿನೇಶ್ ಸರ್ ಅವರು .
ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಮುತ್ತಪ್ಪ ಮೇಲಿನಮನಿ ಯವರುಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು…
ವರದಿ. ಸಂಜೀವಪ್ಪ ದೊಡ್ಡಮನಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030