ಅನಾರೋಗ್ಯ ಕಾರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಉದ್ಯಮಿ ರತನ್ ಟಾಟಾ ಇಂದು ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ.
ಭಾರತದ ಅತಿದೊಡ್ಡ ಕೈಗಾರಿಕಾ ಸಮೂಹ ಟಾಟಾ ಸನ್ಸ್ನ ಚೇರ್ಮನ್ ರತನ್ ಟಾಟಾ ವಿಧಿವಶರಾಗಿದ್ದು, ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಎರಡು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.86ರ ಹರೆಯದ ರತನ್ ಟಾಟಾ ಅವರು ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇಂದು ಸಂಜೆ ಅವರ ಆರೋಗ್ಯ ಗಂಭೀರವಾಗಿದ್ದು ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಇನ್ನು ರತನ್ ಟಾಟಾ ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿರುವ ಆರ್ಪಿಜಿ ಎಂಟರ್ಪ್ರೈಸಸ್ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ‘ಗಡಿಯಾರ ತನ್ನ ನಿಲ್ಲಿಸಿದೆ. ಟೈಟನ್ ಇನ್ನಿಲ್ಲ. ರತನ್ ಟಾಟಾ ಅವರು ಸಮಗ್ರತೆ, ನೈತಿಕ ನಾಯಕತ್ವ ಮತ್ತು ಲೋಕೋಪಕಾರದ ದಾರಿದೀಪವಾಗಿದ್ದರು, ಅವರು ವ್ಯಾಪಾರ ಮತ್ತು ಅದರಾಚೆಗಿನ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರು ನಮ್ಮ ನೆನಪುಗಳಲ್ಲಿ ಶಾಶ್ವತವಾಗಿ ಇರಲಿದ್ದಾರೆ. ಮತ್ತು ಇಂತಹ ಮಹಾನ್ ವ್ಯಕ್ತಿಗಳು ನಮ್ಮ ಒಂದು ದೇಶದ ಅಭಿರುದ್ದಿ ಹಾಗೂ ಉನ್ನತ ಮಟ್ಟದ ವ್ಯವಹಾರ ಸಂಕೇತದ ಆದಿಯಲ್ಲಿ ಇದ್ದರೆ ಇಡಿ ದೇಶವೇ ಸುಬಿಕ್ಷಾ….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030