ಬೆಂಗಳೂರು : ಇತ್ತೀಚಿಗೆ ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿರುವ ದರ್ಶನ್ ಗೆ ರಾಜಾತಿಥ್ಯ ನೀಡಿದಂತ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಇದೀಗ ಸಿಸಿಬಿ ಅಧಿಕಾರಿಗಳು ಮತ್ತೊಮ್ಮೆ ದಾಳಿ ಮಾಡಿದ್ದು, ದಾಳಿಯ ವೇಳೆ ಮೊಬೈಲ್, ಡ್ರಗ್ಸ್, ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ದರ್ಶನ್ ಗೆ ರಾಜಾತಿಥ್ಯ ನೀಡಿದ ವಿಚಾರಕ್ಕೇ ಸಂಬಂಧಪಟ್ಟಂತೆ ccb ಅಧಿಕಾರಿಗಳು ಜೈಲಿನ ಮೇಲೆ ದಾಳಿ ಮಾಡಿದ್ದಾರೆ.ಇದೇ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಜೈಲಿನ ಮೇಲೆ ನಿನ್ನೆ ಮತ್ತೊಮ್ಮೆ ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ ವಿಲ್ಸನ್ ಗಾರ್ಡನ್ ನಾಗನ ಬಳಿ ಇದ್ದ ಮೊಬೈಲ್ ಸೇರಿದಂತೆ ಸುಮಾರು 18 ಮೊಬೈಲ್ ಸೀಜ್ ಆಗಿದೆ. ಇಷ್ಟಲ್ಲದೇ ಡ್ರಗ್ಸ್ ಮತ್ತು ಹಣ ಕೂಡ ಸಿಕ್ಕಿದೆ.
ದಾಳಿ ವೇಳೆ 1.3 ಲಕ್ಷ ಮೌಲ್ಯದ ಸ್ಯಾಮ್‌ಸಂಗ್ ಫೋನ್‌ಗಳು, ಏಳು ಎಲೆಕ್ಟ್ರಿಕ್ ಸ್ಟವ್‌ಗಳು, ಐದು ಚಾಕುಗಳು, ಮೂರು ಮೊಬೈಲ್ ಫೋನ್ ಚಾರ್ಜರ್‌ಗಳು, ಎರಡು ಪೆನ್ ಡ್ರೈವ್‌ಗಳು, 36,000 ರೂಪಾಯಿ ನಗದು, ಸಿಗರೇಟ್, ಬೀಡಿ ಮತ್ತು ಬೆಂಕಿಕಡ್ಡಿ ಬಾಕ್ಸ್‌ಗಳು ಸೇರಿದಂತೆ 15 ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ವಿಲ್ಸನ್ ಗಾರ್ಡನ್ ನಾಗ ಜೈಲಿನಲ್ಲೇ ಕೂತ ಹೊರಗಡೆಯ ವ್ಯಕ್ತಿಗಳ ಧಮ್ಕಿ ಹಾಕಿ ಹಣ ವಸೂಲಿ ಮಾಡ್ತಿದ್ದ ಆರೋಪ ಇತ್ತು. ಹೀಗಾಗಿ ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿ ಆತನ ಮೊಬೈಲ್ ಸೀಜ್ ಮಾಡಿದ್ದಾರೆ. ಈಗಾಗಲೇ ದರ್ಶನ್ ಜೊತೆ ನಾಗ ಕ್ಲೋಸ್ ಆಗಿ ಇದ್ದಿದ್ದು ಜಗಜ್ಜಾಹಿರವಾಗಿತ್ತು. ಇದರ ಬೆನ್ನಲ್ಲೆ ಆತನ ಮೇಲೆ ಕಣ್ಣಿಟ್ಟಿದ್ದ ಸಿಸಿಬಿ ಟೀಂ, ಆತನ ಮೊಬೈಲ್ ಸೀಜ್ ಮಾಡಿ ಮತ್ತೆ ಈ ರೀತಿ ಚಟುವಟಿಕೆಯಲ್ಲಿ ಭಾಗಿಯಾಗದಂತೆ ವಾರ್ನ್ ಮಾಡಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030