ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ 151 ಅರ್ಜಿಗಳ ವಿಲೇವಾರಿ
ಬೆಂಗಳೂರು ನಗರ ಜಿಲ್ಲೆ, : ಕರ್ನಾಟಕ ಲೋಕಾಯುಕ್ತ ಕಚೇರಿಯಿಂದ ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಮತ್ತು ಬೆಂಗಳೂರು ಪೂರ್ವ ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದು ಕೊರತೆ, ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯ ಎರಡನೇ ದಿನವಾದ ಇಂದು ಕರ್ನಾಟಕ ರಾಜ್ಯ ಲೋಕಾಯುಕ್ತದ ಗೌರವಾನ್ವಿತ ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ರವರು ಸಾರ್ವಜನಿಕರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಿದರು.
ಎರಡು ದಿನಗಳ ಕಾಲ ನೆಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಯಲಹಂಕ ತಹಶೀಲ್ದಾರ್ ಕಛೇರಿಗೆ-19 ಅರ್ಜಿಗಳು, ಪೊಲೀಸ್ ಇಲಾಖೆಗೆ-04, ಕಂದಾಯ ಇಲಾಖೆಗೆ-06, ಬಿಬಿಎಂಪಿ-01, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ-01, ಬೆಂಗಳೂರು ಉತ್ತರ ಉಪವಿಭಾಗಧಿಕಾರಿಗಳ ಕಚೇರಿಗೆ-02, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ-04, ಇತರೆ ಇಲಾಖೆಗಳಿಗೆ -08 ಸೇರಿ ಒಟ್ಟು 251 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 151 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಯುಕ್ತ ಕಾನೂನು ಅಭಿಪ್ರಾಯ-2 ನ ಸಹಾಯಕ ನಿಬಂಧಕರಾದ ಶುಭವೀರ. ಬಿ, ಹಿರಿಯ ಸಿವಿಲ್ ನ್ಯಾಯದೀಶರು ಮತ್ತು ಜಿಲ್ಲಾ ಕಾನೂನು ಸೇವ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿಗಳಾದ ವರದರಾಜು.ಬಿ, ಸಿವಿಲ್ ನ್ಯಾಯದೀಶರು ಮತ್ತು ಉಪಲೋಕಾಯುಕ್ತರ ಅಪ್ತ ಕಾರ್ಯದರ್ಶಿಗಳಾದ ಕಿರಣ್ ಪಿ.ಎಂ ಪಾಟೀಲ್, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ನ ಕಾರ್ಯನಿರ್ವಹಕಧಿಕಾರಿಗಳಾದ ಕೆ.ಎಸ್ ಲತಾ ಕುಮಾರಿ, ಬೆಂಗಳೂರು ನಗರ ಅಪರಜಿಲ್ಲಾಧಿಕಾರಿಗಳಾದ ಡಾ. ಜಗದೀಶ್ ನಾಯಕ್, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030