ರೆಡ್ ಕ್ರಾಸ್ ಹಾಗೂ ಜಯಮಹಲ್ ಲಯನ್ಸ್ ಕ್ಲಬ್ ಜಂಟಿ ಸಹಯೋಗದಲ್ಲಿ ರಕ್ತದಾನ ಶಿಬಿರ…!!!

ಬೆಂಗಳೂರು ನಗರ ಜಿಲ್ಲೆ: ನಗರದ ಸೆಂಟ್ರಲ್ ಕಾಲೇಜ್ ಆವರಣದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ (ಎನ್‌ಎಸ್‌ಎಸ್) , ಯೂತ್ ರೆಡ್ ಕ್ರಾಸ್ ಹಾಗೂ ಜಯಮಹಲ್ ಲಯನ್ಸ್ ಕ್ಲಬ್ ಜಂಟಿ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಲಿಂಗರಾಜಗಾಂಧಿಯವರು ಉದ್ಘಾಟಿಸಿದರು. ಈ ಶಿಬಿರದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಇದೇ ಸಂದರ್ಭದಲ್ಲಿ ಕುಲಸಚಿವರಾದ ಟಿ. ಜವರೇಗೌಡ, ಎನ್.ಎಸ್.ಎಸ್ ಸಂಯೋಜಕ ಡಾ. ಗೋವಿಂದೇಗೌಡ, ಲಯನ್ಸ್ ರಕ್ತ ನಿಧಿಯ ವ್ಯವಸ್ಥಾಪಕರಾದ ಡಾ.ದೀಪಕ್ ಹಾಗೂ ಬ್ರಿಟನ್ ವಿಶ್ವವಿದ್ಯಾಲಯ ನಿಯೋಗದ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *