ವಿಜೃಂಭಣೆಯಿಂದ ಕನಕ ಜಯಂತಿ ಆಚರಣೆ
ಸಂಗಮೆಶ ಕೌಟಗೆ ಮಾತನಾಡಿ ಕನಕದಾಸರ ಜೀವನ ಚರಿತ್ರೆ ತಿಳಿಸಿದರು, ಕನಕದಾಸರು ಒಬ್ಬರು ಮಹಾನ ಕಿರ್ತನಕಾರರಾಗಿದ್ದರು. ಅವರ ಮೊದಲ ಹೆಸರು ತಿಮ್ಮಪ್ಪ ನಾಯಕ ಎಂದಿತ್ತು. ಅವರು ಬಂಕಾಪುರ ಪ್ರಾಂತ್ಯಕ್ಕೆ ಡಣ್ಣಾಯಕರಾಗಿದ್ದರು, ಅವರು ಒಮ್ಮೆ ತಿಮ್ಮಪ ನಾಯಕ ಜೀರ್ಣೋದ್ಧಾರ ಕೆಲಸ ಮಾಡುವಾಗ ಅವರಿಗೆ ಭೂಮಿಯಲ್ಲಿ ಚಿನ್ನ ದೊರೆಯುತ್ತದೆ ಅದನ್ನು ಜನರಿಗೆ ದಾನ ಮಾಡಿದ್ದಕಾರಣ ಅವರ ಹೆಸರು ಕನಕ ಎಂದು ಬದಲಾಯಿತು.
ಅನೀಲ್.ಬಿ. ಮೇತ್ರ ಖಜಾಂಚಿ, ಜಿಲ್ಲಾ ನ್ಯಾಯಾಂಗ ನೌಕರರ ಪತ್ತಿನ ಸಹಕಾರ ಸಂಘ ಬಿದರ ಮಾತನಾಡಿ
ಜಾತಿ-ಕುಲ ಸೃಷ್ಟಿಸಿರುವ ಸಾಮಾಜಿಕ ತಾರತಮ್ಯ ಮತ್ತು ಅಸಮಾನತೆ ಬಗ್ಗೆ ಕೀರ್ತನೆ-ಕಾವ್ಯಗಳ ಮೂಲಕ ಜನಜಾಗೃತಿಗೊಳಿಸಿದ್ದ ಕನಕ ದಾಸರು ದಾಸಶ್ರೇಷ್ಠರು ಮಾತ್ರವಲ್ಲ, ಒಬ್ಬ ಅಪೂರ್ವ ಸಮಾಜ ಸುಧಾರಕರಾಗಿದ್ದರು. ಜಾತಿ-ಧರ್ಮದ ದುರ್ಬಳಕೆಯಿಂದಾಗಿ ಇತಿಹಾಸದ ಚಕ್ರ ಹಿಂದಕ್ಕೆ ಚಲಿಸುತ್ತಿದೆಯೇನೋ ಎನ್ನುವ ಆತಂಕ ಕಾಡುತ್ತಿರುವ. ಇಂದಿನ ದಿನಗಳಲ್ಲಿ ಕನಕದಾಸರ ಚಿಂತನೆ ನಮ್ಮ ದಾರಿಯ ಬೆಳಕಾಗಬೇಕು. ಕವಿ, ದಾರ್ಶನಿಕ, ಮಹಾನ್ ಮಾನವತಾವಾದಿ ಕನಕದಾಸರುಕನಕದಾಸರು ಬರಿ ಒಂದು ಜಾತಿಗೇ ಸೀಮಿತವಾದ ಭಕ್ತರಲ್ಲ ಎಲ್ಲಾ ಜಾತಿಗಳಿಗೆ ಬೇಕಾದವರು. 15 – 16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ತಪ್ಪಾಗಲಾರದು. ಭಾರತ ಸರಕಾರವು 1990ರಲ್ಲಿ ಅವರ ಹೆಸರಿನಲ್ಲಿ ಪೋಸ್ಟಲ್ ಸ್ಟಾಮಂ ಕೂಡ ಬಿಡುಗಡೆ ಮಾಡಲಾಯಿತು. ಅವರ ಆದರ್ಶದ ತತ್ವಗಳು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೆಕು ಎಂದರು.
ಅಯುಖಾನ ಪಟೆಲ ಮಾತನಾಡಿ ಕನಕದಾಸರು ಒಂಬ ಮಹಾನ ಸಂತರಾಗಿದ್ದರು. ಅವರ ಜಯಂತಿ ಆಚರಿಸಿದರೆ ಸಾಲದು ಅವರ ಜಿವನ ನಮ್ಮ ನೀಜ ಜಿವನದಲ್ಲಿ ಅಳವಡಿಸಿಕೊಂಡು ಸಮಾಜದ ಉತ್ತಮ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೆಕು ಎಂದರು. ಬಳಿರಾಮ ಮೆತ್ರೆ, ಶಾಮರಾವ ಮೆತ್ರೆ ,ಮಾರುತಿ ಮೆತ್ರೆ, ರಾಮಶೆಟ್ಟಿ ಕೌಟಗೆ. ಸುಮಂತ, ಗುರುನಾಥ ಮೈನಾಳೆ. ಹೈದರ ಪಟೆಲ, ರಮೆಶ ಉಜುಣಗೆ, ಸಿದ್ದಪಾ ಉಜುಣಗೆ, ಕಲ್ಲಪಾ, ಸುನೀಲ ಮೆತ್ರೆ, ಧನರಾಜ ಮೆತ್ರೆ ಅಖಿಲೆಶ ಮೆತ್ರೆ. ಗ್ರಾ.ಪ.ಸದಸ್ಯರು ಬಸವರಾಜ ನೆಳಗೆ, ಜೈಪ್ರಕಾಶ ಅಷ್ಟೂರೆ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು…
ವರದಿ. ಸುನಿಲ್ ಮೇತ್ರಿ, ಬೀದರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030