ಸರಕಾರಿ ಶಾಲೆಗೆ ನೀರು ಶುದ್ಧೀಕರಣ ಘಟಕ ನೀಡಿದ್ದು ಶ್ಲಾಘನೀಯ…!!!

Listen to this article

ಸರಕಾರಿ ಶಾಲೆಗೆ ನೀರು ಶುದ್ಧೀಕರಣ ಘಟಕ ನೀಡಿದ್ದು ಶ್ಲಾಘನೀಯ
ಗುಳೇದಗುಡ್ಡ: ಬಾಲಕರ ಸರಕಾರಿ ಶಾಲೆ ಹಾಗೂ ಪಪೂ
ಕಾಲೇಜಿನ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶುದ್ಧ
ಕುಡಿಯುವ ನೀರು ಒದಗಿಸಲು ಬೆಂಗಳೂರಿನ ಸಿಎಸ್‍ಜಿ ಇಂಟನ್ಯಾಶನಲ್
ಸಂಸ್ಥೆ ನೀರು ಶುದ್ಧೀಕರಣ ಘಟಕವನ್ನು ದೇಣಿಗೆಯಾಗಿ
ನೀಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಶುದ್ಧ ನೀರಿನ
ಘಟಕವನ್ನು ಸರಿಯಾಗಿ ಬಳಸಿಕೊಳ್ಳಬೇಕು. ನೀರನ್ನು ವ್ಯರ್ಥವಾಗಿ
ಹಾಳು ಮಾಡಬಾರದು ಎಂದು ಸರಕಾರಿ ಪಪೂ ಕಾಲೇಜಿನ
ಉಪಪ್ರಾಚಾರ್ಯ ಎನ್.ಸಿ. ಮುದಕವಿ ಹೇಳಿದರು.
ಅವರು ಬೆಂಗಳೂರಿನ ಸಿಎಸ್‍ಜಿ ಅಂತಾರಾಷ್ಟ್ರೀಯ ಸಂಸ್ಥೆಯು
ಪಟ್ಟಣದ ಬಾಲಕರ ಸರಕಾರಿ ಪಪೂ ಕಾಲೇಜು ಹಾಗೂ ಪ್ರೌಢಶಾಲೆಗೆ
ಸುಮಾರು 1.30 ಲಕ್ಷ ರೂ. ವೆಚ್ಚದ ನೀರು ಶುದ್ಧೀಕರಣ
ಘಟವನ್ನು ದೇಣಿಗೆ ನೀಡಿದ್ದು, ಬುಧವಾರ ಅದನ್ನು ಉದ್ಘಾಟಿಸಿ
ಮಾತನಾಡಿದರು.
ಸಿಎಸ್‍ಜಿ ಅಂತಾರಾಷ್ಟ್ರೀಯ ಸಂಸ್ಥೆಯ ನಬಿ ಜಮಖಂಡಿ ಮಾತನಾಡಿ, ನೀರು
ಮಾನವನಿಗೆ ಅತ್ಯಂತ ಅವಶ್ಯಕವಾಗಿದೆ. ಅದರಲ್ಲೂ ಸ್ವಚ್ಛಶುದ್ಧ
ಕುಡಿಯುವ ನೀರು ಮಾನವನ ಮಕ್ಕಳ ಆರೋಗ್ಯಕ್ಕೆ
ಅವಶ್ಯವಾಗಿದ್ದು ಇದನ್ನು ಮನಗಂಡು ಪಟ್ಟಣದ ಸರಕಾರಿ ಬಾಲಕರ
ಪಪೂ ಕಾಲೇಜಿಗೆ ನಮ್ಮ ಸಂಸ್ಥೆಯ ವತಿಯಿಂದ ಶುದ್ಧ ನೀರಿನ
ಘಟಕವನ್ನು ನೀಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಬಸವರಾಜ ದಳವಾಯಿ,
ಶಿಕ್ಷಕರಾದ ರಾಜಶೇಖರ ಪಾಗಿ, ಮುರ್ತುಜಾಸಾಬ ಮದರಂಗಿ, ಸಿದ್ದು
ಕೊರವರ, ಎಫ್.ಎ. ಸೊಲಾಪೂರಕರ, ಜಾವೇದ ಜರತಾರಘರ, ಡಾ.
ಪರಮೇಶ್ವರಿ ಹಿರೇಮಠ, ಬಿ.ಕೆ. ಹಿರೇಮಠ, ಲಕ್ಷ್ಮಣ ಬಾರಕೇರ,
ಎಸ.ಎಂ.ನಾಗರಾಳ, ಲಕ್ಷ್ಮಣ ಬದಾಮಿ ಮತ್ತಿತರರು ಇದ್ದರು…

ವರದಿ, ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend