ರಸ್ತೆಯ ಮೇಲೆ ನೀರು ನಿಂತು ಸಂಚಾರಕ್ಕೆ ಅಡ್ಡಿ
ಗುಳೇದಗುಡ್ಡ: ಪಟ್ಟಣದ ಹೀರೋ ಶೋರಮ್‌ದಿಂದ ಬಳಗೇರಿ
ಅವರ ಮನೆವರೆಗಿನ ಡಿವಿಜನ್ ನಂ ೨೦-೨೧ರ ಮಧ್ಯದಲ್ಲಿ ನಿರ್ಮಿಸಿರುವ
ಕಾಂಕ್ರೀಟ್ ರಸ್ತೆ ಅವೈಜ್ಞಾನಿಕವಾಗಿದ್ದು, ರಸ್ತೆಯ ಮಧ್ಯದಲ್ಲಿ
ನೀರು ನಿಲ್ಲುತ್ತಿದೆ. ರಸ್ತೆಯ ತಗ್ಗಾಗಿ ನಿರ್ಮಿಸಿದ್ದರಿಂದ ಮಳೆಯ
ನೀರು, ನಲ್ಲಿಯ ನೀರು ಗಟಾರಕ್ಕೆ ಹೋಗದೇ ರಸ್ತೆಯ
ಮಧ್ಯದಲ್ಲಿಯೇ ನಿಲ್ಲುತ್ತಿದೆ ಎಂದು ಪುರಸಭೆ ಮಾಜಿ ಸದಸ್ಯ ಸಿದ್ದು
ಅರಕಾಲಚಿಟ್ಟಿ ದೂರಿದ್ದಾರೆ.
ರಸ್ತೆ ತಗ್ಗಾಗಿದ್ದರಿಂದ ನೀರು ರಸ್ತೆಯಲ್ಲಿ ನಿಂತು
ಮಲೀನಗೊಂಡು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೇ
ರಸ್ತೆ ಕೂಡಾ ಹಾಳಗಿದೆ. ರಸ್ತೆ ಮೇಲೆ ನೀರು ನಿಲ್ಲದಂತೆ
ಕ್ರಮಕೈಗೊಳ್ಳುವಂತೆ ಪುರಸಭೆಗೆ ಮನವಿ ಮಾಡಿದರೂ
ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ನೀರು ನಿಂತು ಮಲೀನಗೊಂಡು
ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆ. ರಸ್ತೆ ನಿರ್ಮಿಸುವ
ಮುನ್ನ ನೀರು ಗಟಾರಕ್ಕೆ ಹರಿಯವಂತೆ ವ್ಯವಸ್ಥೆ ಮಾಡಿಲ್ಲ.
ಪುರಸಭೆ ಅಧಿಕಾರಿಗಳು ಇನ್ನಾದರೂ ರಸ್ತೆಯಲ್ಲಿ ನೀರು ನಿಲ್ಲದೇ,
ಗಾಟರಕ್ಕೆ ಹರಿದುಹೋಗುವಂತೆ ವ್ಯವಸ್ಥೆ ಮಾಡಿ, ಸಾರ್ವಜನಿಕರಿಗೆ
ಅನುಕೂಲ ಮಾಡಿಕೊಡಬೇಕು ಎಂದು ಅವರು ಅಗ್ರಹಿಸಿದ್ದಾರೆ…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030