ಏಕಲ್ ಅಭಿಯಾನ ರಥಯಾತ್ರೆ ಜಾಥಾಕ್ಕೆ ಚಾಲನೆ
ಗುಳೇದಗುಡ್ಡ: ದೇಶದಲ್ಲಿ ಬಹಳಷ್ಟು ಜನರು ಪ್ರಾಥಮಿಕ
ಶಾಲಾ ಹಂತದ ಶಿಕ್ಷಣ ಪಡೆದಿಲ್ಲ, ಶಾಲೆಗೆ ಹೋಗುತ್ತಿಲ್ಲ. ವಿದ್ಯಾಭ್ಯಾಸದ
ಅರಿವಿಲ್ಲದೆಯೇ ಶಾಲೆ ಬಿಟ್ಟ ಮಕ್ಕಳು ಅಕ್ಷರಜ್ಞಾನ
ಪಡೆದುಕೊಳ್ಳಲು, ಅವರ ಉತ್ತಮ ಆರೋಗ್ಯ ಹಾಗೂ ಸಮಾಜದ
ಅಭ್ಯುದಯಕ್ಕಾಗಿ ಏಕಲ್ ವಿದ್ಯಾ ಸಂಸ್ಥೆ ನಿರಂತರವಾಗಿ
ಪ್ರಯತ್ನಿಸುತ್ತಿದೆ ಎಂದು ಡಾ.ವಿ.ಎ ಬೆನಕನಾಳ ಹೇಳಿದರು.
ಅವರು ಗುರುವಾರ ಪಟ್ಟಣದ ಹರದೊಳ್ಳಿ ಮಾರುತೇಶ್ವರ
ದೇವಸ್ಥಾನದಿಂದ ಪ್ರಾರಂಭಗೊAಡ ಏಕಲ್ ಅಭಿಯಾನ ಜಾಥಾಕ್ಕೆ
ಚಾಲನೆ ನೀಡಿ ಮಾತನಾಡಿದರು. ಏಕಲ್ ರಥಯತ್ರೆಯಲ್ಲಿ
ಕುಂಭಹೊತ್ತ ಸುಮಂಗಲೆಯರು ಕಳಸ ಆರತಿಯೊಂದಿಗೆ
ಭಾಗವಹಿಸಿದ್ದರು. ರಥಯಾತ್ರೆ ಪಟ್ಟಣದ ಪ್ರಮುಖ ರಸ್ತೆಯ
ಮೂಲಕ ಹಾಯ್ದು ಕೋಟೆಕಲ್ ಗ್ರಾಮಕ್ಕೆ ತೆರಳಿತು.
ಈ ಸಂದರ್ಭದಲ್ಲಿ ಏಕಲ್ ಮಹಿಳಾ ಸಂಘದ ಅಧ್ಯಕ್ಷೆ ಸಾವಿತ್ರಿ
ಜೋಗೂರು, ಸವಿತಾ ಉಂಕಿ, ಶಶಿಕಲಾ ಭಾವಿ, ಮಹಾದೇವ ಜಗತಾಪ,
ಪ್ರಶಾಂತ ಪತ್ತಾರ, ಯೋಗಿಶ ಉಂಕಿ, ಶಂಕ್ರಪ್ಪ ರೂಡಗಿ,
ಶಂಕರ ರಾಠೋಡ ಮತ್ತಿತರರು ಇದ್ದರು…
ವರದಿ, ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030