ಸಂವಿಧಾನದ ಆಶಯಗಳನ್ನು ಗೌರವಿಸೋಣ: ತಹಶೀಲ್ದಾರ ಎಂ.ಮಂಜುಳಾ
.
ಗುಳೇದಗುಡ್ಡ: ವಿವಿಧತೆಯಲ್ಲಿ ಏಕತೆಯನ್ನು
ಕಂಡುಕೊಳ್ಳಲು ಭಾರತದ ಸಂವಿಧಾನ ಪ್ರಮುಖ ಪಾತ್ರ ವಹಿಸಿದೆ.
ಸಂವಿಧಾನದ ಆಶಯಗಳನ್ನು ಗೌರವಿಸುವುದು ಮತ್ತು
ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು
ತಹಶೀಲ್ದಾರ ಎಂ. ಮಂಜುಳಾ ಹೇಳಿದರು.
ಅವರು ಮಂಗಳವಾರ ಪಟ್ಟಣದ ತಹಶೀಲ್ದಾರ
ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನದ ದಿನಾಚರಣೆ
ಅಂಗವಾಗಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ
ಸಲ್ಲಿಸಿ ಮಾತನಾಡಿ, ೧೯೪೯ ನವೆಂಬರ್ ೨೬ರಂದು ಭಾರತದ
ಸಂವಿಧಾನವನ್ನು ಅಂಗೀಕರಿಸಲಾಯಿತು. ಅದು ೨೬ ಜನವರಿ ೧೯೫೦ ರಂದು
ಜಾರಿಗೆ ಬಂದಿತು ಹೀಗಾಗಿ ಪ್ರತಿ ವರ್ಷ ನವೆಂಬರ್ ೨೬ ಅನ್ನು ಸಂವಿಧಾನ
ದಿನ ಎಂದು ಆಚರಿಸಲಾಗುತ್ತದೆ. ಭಾರತದ ಸಂವಿಧಾನವು
ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳಿಗೆ ಮಹತ್ವ
ಕೊಟ್ಟಿದೆ. ಭಾರತದ ಸಂವಿಧಾನವು ಯಾವುದೇ ಭೇದ-ಭಾವ
ಮಾಡದೇ ಸಮಾನ ನಾಗರಿಕ ಹಕ್ಕುಗಳನ್ನು ನೀಡಿದ್ದು
ಅವುಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ ಜಿ.ವಿ. ರಜಪೂತ, ಸುಭಾಷ
ವಡವಡಗಿ ಹಾಗೂ ಸಿಬ್ಬಂದಿ ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030