ಎಸ್‌ಎಸ್‌ಎಲ್‌ಸಿ ಫಲಿತಾಂಶ ನೂರಕ್ಕೆ ನೂರು ಪಡೆಯಬೇಕು : ಬಿಇಓ ಪೆಟ್ಲೂರ
ಗುಳೇದಗುಡ್ಡ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ,
ಉತ್ತಮ ಫಲಿತಾಂಶ ಬರುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ
ಮಹತ್ವದ್ದಾಗಿದೆ. ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯಲು
ವಿದ್ಯಾರ್ಥಿಗಳಿಗೆ ಗುಂಪು ಚರ್ಚೆ, ಪ್ರಶ್ನೆ ಪತ್ರಿಕೆ ಬಿಡಿಸುವುದು,
ರಸಪ್ರಶ್ನೆ, ಗಣಿತ ವಿಷಯದಲ್ಲಿ ಮಗ್ಗಿಗಳನನ್ನು ಕಂಠ ಪಾಠ
ಮಾಡಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನು
ಹಮ್ಮಿಕೊಳ್ಳಬೇಕು ಎಂದು ತಾಲೂಕ ಕ್ಷೇತ್ರಶಿಕ್ಷಣಾಧಿಕಾರಿ ಕೆ.ವಿ.
ಪಟ್ಲೂರ ಹೇಳಿದರು.
ಅವರು ಸಮೀಪದ ಚಿಕ್ಕಮುಚ್ಚಳಗುಡ್ಡದ ಸರಕಾರಿ ಆದರ್ಶ
ವಿದ್ಯಾಲಯಕ್ಕೆ ಸೋಮವಾರ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಕಠಿಣವಾದ
ವಿಷಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ, ಓದುವಂತೆ ಮಾಡಬೇಕು.
ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆ ಕಾಳಜಿವಹಿಸಬೇಕು ಎಂದರು
ಇದೇ ಸಂದರ್ಭದಲ್ಲಿ ನೂತನ ಕ್ಷೇತ್ರಶಿಕ್ಷಣಾಧಿಕಾರಿ ಕೆ.ವಿ. ಪೆಟ್ಲೂರ
ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ
ಕ್ಷೇತ್ರಸಮನ್ವಯ ಅಧಿಕಾರಿ ಎಂ.ಬಿ. ದೊಡ್ಡಪ್ಪನವರ, ಶಿಕ್ಷಣ
ಸಂಯೋಜಕರಾದ ಬಿ.ಕೆ. ಚಿಮ್ಮಲ, ಎಸ್.ಪಿ. ಗೌಡರ. ಶಾಲೆಯ
ಮುಖ್ಯೋಪಾಧ್ಯಾಯ ಶಂಕರರಾವ ಕುಲಕರ್ಣಿ, ಹನಮಪ್ಪ
ಹೊಸಮನಿ, ಬಸವರಾಜ ಸಿಂದಗಿಮಠ, ಎಸ್.ಬಿ. ಮುದನೇಗಗುಡಿ
ಶ್ರೀನಿವಾಸ ಈಳಗೇರ, ಭಾಗ್ಯಲಕ್ಷö್ಮ ಟಿ.ಎಚ್. ಕಾವ್ಯಾ ಪಾಟೀಲ, ಕೇಶವ
ರಘುವೀರ, ಅಶೋಕ ಪೂಜಾರಿ, ಹನಮಂತ ಬಂಡಿವಡ್ಡರ, ರಮೇಶ
ಹಂಜಿ, ಕೀರ್ತಿ ಬಡಿಗೇರ, ರಮೇಶ ಕತ್ತಿಕೈ, ದುರ್ಗಾ ಬಿ., ರಂಗನಾಥ
ಈಳಗೇರ, ಅರ್ಚನಾ ಚಿಮ್ಮಲ, ಮತ್ತಿತರರು ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030