ಮಕ್ಕಳಲ್ಲಿ ಕನಸುಗಳನ್ನು ಬಿತ್ತುವ ವಿನೂತನ ಕಾರ್ಯಕ್ರಮ..
ಗುಳೇದಗುಡ್ಡದಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ವಿನೂತನ
ಕಾರ್ಯಕ್ರಮ
ಗುಳೇದಗುಡ್ಡ: ಮಕ್ಕಳ ದಿನಾಚರಣೆ ನಿಮಿತ್ತವಾಗಿ ಪಟ್ಟಣದ
ತಹಸೀಲ್ದಾರ ಕಚೇರಿಯಲ್ಲಿ ವಿಶೇಷ ತಹಸೀಲ್ದಾರ ಮಹೇಶ ಗಸ್ತಿ
ಅವರು ಆಯ್ದ ಶಾಲಾ ಮಕ್ಕಳಲ್ಲಿ ಉನ್ನತ ಹುದ್ದೆಯ ಕನಸನ್ನು
ಬಿತ್ತಲು ವಿನೂತನವಾದ ಕಾರ್ಯಕ್ರಮವೊಂದನ್ನು
ಹಮ್ಮಿಕೊಂಡಿದ್ದು ವಿಶೇಷವೆನಿಸಿತ್ತು.
ಮಕ್ಕಳ ದಿನಾಚರಣೆ ದಿನವಾದ ಗುರುವಾರ ಆಯ್ದ 3 ವಿಶೇಷ
ಚೇತನರು ಸೇರಿದಂತೆ ಒಟ್ಟು 10 ಮಕ್ಕಳನ್ನು ತಹಸೀಲ್ದಾರ
ಕಚೇರಿಗೆ ಕರೆಯಿಸಿ ಅವರಿಗೆ ವಿಶೇಷ ತಹಸೀಲ್ದಾರ ತಮ್ಮ
ಆಸನವನ್ನು ಬಿಟ್ಟುಕೊಟ್ಟು ಅವರಿಂದಲೇ ಜಾತಿ ಪ್ರಮಾಣಪತ್ರ,
ಆದಾಯ ಪ್ರಮಾಣ ಪತ್ರ, ಮಾಸಾಶನ ಮಂಜೂರಿ, ಅಂಗವಿಕಲ
ಮಾಸಾಶನ ಮಂಜೂರಿ ಹೀಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು
ಪಡೆಲು ಬಂದ ಅರ್ಜಿಗಳಿಗೆ ಫಲಾನುಭವಿಗಳ ಸಂದರ್ಶನದ
ಮೂಲಕ ಮಂಜೂರಿ ಮಾಡಿಸುವುದರ ಬಗ್ಗೆ ತಿಳಿಸಿ ಹೇಳಿ ಅವರಿಂದಲೇ
ಮಂಜೂರಿ ಮಾಡಿಸಿದ್ದು ವಿಶೇಷವೆನಿಸಿತ್ತು.
ಪ್ರತಿ ಫಲಾನುಭವಿಗಳ ಮಂಜೂರಾತಿಗೆ ವಿಶೇಷ ತಹಸೀಲ್ದಾರ
ಮಹೇಶ ಗಸ್ತಿ ಅಂತಿಮವಾಗಿ ಹೆಬ್ಬಟ್ಟು ಒತ್ತುತ್ತಿದ್ದರು. ಇದೊಂದು
ವಿನೂತನ ಕಾರ್ಯಕ್ರಮವೆಂದು ಮಕ್ಕಳು ಹೇಳಿಕೊಂಡರು.
ಮಕ್ಕಳು ಅಧಿಕಾರಿಗಳ ಆಸನದ ಮೇಲೆ ಕುಳಿತು, ಅಧಿಕಾರಿಗಳಿಂದ
ಮಾಹಿತಿ ಪಡೆದು ಅದರಂತೆ ಗಣಕಯಂತ್ರದಲ್ಲಿ ವಿವಿಧ
ಅರ್ಜಿಗಳಲ್ಲಿಯ ಹೆಸರು, ಜಾತಿ, ವಯಸ್ಸು, ಜನನ ದಿನಾಂಕ,
ವೈದ್ಯಕೀಯ, ವಿಳಾಸ ಹೀಗೆ ವಿವಿಧ ಪ್ರಮಾಣ ಪತ್ರಗಳನ್ನು
ಮಕ್ಕಳೇ ಖುದ್ದಾಗಿ ಪರೀಕ್ಷಿಸಿ ಅರ್ಜಿಗಳನ್ನು ಮಂಜೂರಾತಿ ಮಾಡಿದ್ದು
ಅವರಿಗೆ ಖುಷಿ ತಂದುಕೊಟ್ಟಿತು.
ವಿಶೇಷ ತಹಸೀಲ್ದಾರ ಮಹೇಶ ಗಸ್ತಿ ನಂತರ ಈ
ಚಟುವಟಿಕೆಗಳಲ್ಲಿ ಭಾಗಿಯಾದ ಎಲ್ಲ ಮಕ್ಕಳಿಗೆ ಡಾ.ಸಿ.ಎಂ.ಜೋಶಿ
ಬರೆದ ಸಾಧನೆಯ ಶಿಖರ ಪುಸ್ತಕ, ನೋಟ್ ಬುಕ್,
ಪೆನ್ನುಗಳನ್ನು ಕೊಟ್ಟು ಪ್ರೋತ್ಸಾಹಿಸಿ, ಮುಂದೆ ತಾವೂ ಇಂತಹ
ಹುದ್ದೆ ಸಂಪಾದಿಸುವುದಕ್ಕಾಗಿ ಹೆಚ್ಚಿನ ಓದು, ಪ್ರಯತ್ನ
ಮಾಡಬೇಕು. ನನ್ನ ತರಹ ಉನ್ನತ ಹುದ್ದೆ ಸಂಪಾದಿಸಿ
ಸಾರ್ವಜನಿಕರಿಗೆ ಸಕಾಲದಲ್ಲಿ ಕೆಲಸ ಮಾಡಿಕೊಡಬೇಕು ಎಂದು
ಹೇಳಿದರು.
…………………………….
ಶಾಲೆಯಲ್ಲಿ ಪಠ್ಯದ ಜೊತೆಗೆ ಶಿಕ್ಷಕರು ಉನ್ನತ ಹುದ್ದೆ
ಪಡೆಯುವ ಬಗ್ಗೆ ಹೇಳುತ್ತಿದ್ದರು. ಆದರೆ ವಿಶೇಷ ತಹಸೀಲ್ದಾರ
ಮಹೇಶ ಗಸ್ತಿ ಅವರು ನಮ್ಮನ್ನು ತಮ್ಮ ಆಸನದ ಮೇಲೆ
ಕೂಡ್ರಿಸಿ, ಬಡವರ, ವಿಕಲಚೇತನ, ವೃದ್ಧ ಅಜ್ಜ ಅಜ್ಜಿಯರ
ಮಾಸಾಶನವನ್ನು ನಮ್ಮಿಂದ ಮಂಜೂರಿ ಮಾಡಿಸಿದ್ದನ್ನು ನಾನೆಂದಿಗೂ
ಮರೆಯಲಾರೆ. ನಾನೂ ಅವರಂತೆ ಮುಂದೊಂದು ದಿನ
ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅವರಂತೆ ನಾವೂ ಉನ್ನತ ಹುದ್ದೆ
ಸಂಪಾದಿಸಿ ಬಡವರ, ನಿರ್ಗತಿಕರ ಸೇವೆ ಮಾಡುವೆ.— ಸೃಷ್ಠಿ ಕುಂಬಾರ,
ಶಾರದಾ ಹುಣಸಿಮರದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರು, ಬಾಲಕೀಯರ
ಸರ್ಕಾರಿ ಪ್ರೌಢ ಶಾಲೆ, ಗುಳೇದಗುಡ್ಡ….
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030