ನ. 24ರವರೆಗೆ ಮತದಾರರ ನೋಂದಣಿ ಅಭಿಯಾನ
ಗುಳೇದಗುಡ್ಡ: ಚುನಾವಣಾ ಆಯೋಗದ ನಿರ್ದೇಶನದಂತೆ
ಜಿಲ್ಲೆಯಲ್ಲಿ ಮತದಾರರ ನೊಂದಣಿ ಅಭಿಯಾನ ಆರಂಭವಾಗಿದೆ.
ಆಯಾ ಮತಗಟ್ಟೆಗಳಿಗೆ ತೆರಳಿ ಯುವ ಮತದಾರರು
ನೋಂದಣಿ ಮಾಡಿಸಬೇಕು ಎಂದು ತಹಶೀಲ್ದಾರ ಮಂಗಳಾ ಎಂ.
ತಿಳಿಸಿದ್ದಾರೆ.
1-1-2025, 1-4-2025, 1-7-2025 ಹಾಗೂ 1-10-2025ಕ್ಕೆ 18ವರ್ಷ
ಪೂರೈಸುವ, 17 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲ ಅರ್ಹ
ಮತದಾರರು ಮತದಾರರ ಪಟ್ಟಿಗಳಲ್ಲಿ ಹೆಸರು
ನೋಂದಾಯಿಸಿಕೊಳ್ಳಲು ಒಟ್ಟು 4 ಅರ್ಹತಾ ದಿನಾಂಕಗಳು ಇರುತ್ತವೆ
ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ ನ. 23 ಮತ್ತು ನ.
24ರಂದು ಜಿಲ್ಲೆಯಲ್ಲಿ ಮತದಾರರ ವಿಶೇಷ ನೋಂದಣಿ ಅಭಿಯಾನ
ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಂದು ಆಯಾ
ಭಾಗದ ಮತಗಟ್ಟೆ ಅಧಿಕಾರಿಗಳು/ ಮೇಲ್ವಿಚಾರಕರು ಬೆಳಗ್ಗೆ
9ರಿಂದ ಸಂಜೆ 5ರ ವರೆಗೆ ಮತಗಟ್ಟೆಗಳಲ್ಲಿ ಹಾಜರಿದ್ದು ಅರ್ಜಿ
ಸ್ವೀಕರಿಸುತ್ತಾರೆ ಎಂದು ಹೇಳಿದ್ದಾರೆ.
18 ವರ್ಷ ಮೇಲ್ಪಟ್ಟ ಮತದಾರರು ತಮ್ಮ ಭಾಗದ
ಮತಗಟ್ಟೆಗಳಿಗೆ ಭೇಟಿ ನೀಡಿ, ಮತಗಟ್ಟೆ ಅಧಿಕಾರಿಗಳ
ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು
ನಮೂನೆ- 6ರಲ್ಲಿ, ಮೃತ ಮತದಾರರು / ಡಬಲ್
ನೋಂದಣಿಯಾದಂತಹ ಮತದಾರರ ಹೆಸರನ್ನು
ಕಡಿಮೆಗೊಳಿಸಲು ನಮೂನೆ- 7ರಲ್ಲಿ ಹಾಗೂ ಮತದಾರ ಗುರುತಿನ
ಚೀಟಿಯಲ್ಲಿ ತಿದ್ದುಪಡಿ / ಸ್ಥಳಾಂತರ ಇದ್ದಲ್ಲಿ ನಮೂನೆ- 8ರಲ್ಲಿ
ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಲು ತಹಶೀಲ್ದಾರ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030