ಇಂದು ರಾಜ್ಯಮಟ್ಟದ ಟೆನಿಕ್ವಾಯಿಟ್ ಪಂದ್ಯಾವಳಿ
ಗುಳೇದಗುಡ್ಡ : ಸ್ಥಳೀಯ ಯೂನಿವರ್ಸಲ್ ಕ್ರೀಡಾ ಸಂಘದ
ವತಿಯಿಂದ ನ.16ರಂದು ಪುರುಷರ ಹೊನಲು ಬೆಳಕಿನ
ರಾಜ್ಯಮಟ್ಟದ ಟೆನಿಕ್ವಾಯಿಟ್ ಪಂದ್ಯಾವಳಿಯನ್ನು ಪಟ್ಟಣದ ಸರಕಾರಿ
ಪಪೂ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು,
ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳ ಸುಮಾರು 120ಕ್ಕೂ ಹೆಚ್ಚು
ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಕ್ರೀಡಾ ಸಂಘದ
ಅಧ್ಯಕ್ಷ ಮಲ್ಲಿಕಾರ್ಜುನ ಹುನಗುಂದ ಹೇಳಿದರು.
ಅವರು ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ,
ಯೂನಿವರ್ಸಲ್ ಕ್ರೀಡಾ ಸಂಘದಿಂದ ಸತತ ಐದನೇ ಬಾರಿಗೆ ಈ
ಪಂದ್ಯಾವಳಿ ಹಮ್ಮಿಕೊಳ್ಳಲಾಗಿದ್ದು, ನ.16ರಂದು ಮಧ್ಯಾಹ್ನ
ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮಾಜಿ ಶಾಸಕ
ರಾಜಶೇಖರ ಶೀಲವಂತ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು,
ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಕಾಂಗ್ರೆಸ್
ಮುಖಂಡ ಹೊಳಬಸು ಶೆಟ್ಟರ ಉದ್ಘಾಟಿಸುವರು. ಪುರಸಭೆ
ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ, ಸಂಜಯ ಬರಗುಂಡಿ,
ಗಣೇಶ ಶೀಲವಂತ, ಮಹೇಶ ಪಾಟೀಲ, ಕುಬೇರಪ್ಪ ಅಲದಿ, ಸಂಜಯ
ಕಾರಕೂನ, ಸಂಗಮೇಶ ಹುನಗುಂದ, ವಿಠ್ಠಲ ಕಳಸಾ, ಎನ್.ಸಿ.
ಮುದಕವಿ, ಪಿಎಸ್‍ಐ ಸಿದ್ದಪ್ಪ ಯಡಹಳ್ಳಿ, ಪುರಸಭೆ ಮುಖ್ಯಾಧಿಕಾರಿ
ಎ.ಎಚ್. ಮುಜಾವರ, ಡಾ. ಚಂದ್ರಕಾಂತ ಜವಳಿ, ಪ್ರಕಾಶ ವಾಳದಉಂಕಿ,
ಮಂಜು ಧಾರವಾಡ, ಮಲ್ಲಿಕಾರ್ಜುನ ಸತ್ತಿಗೇರಿ ಭಾಗವಹಿಸುವರು
ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ರುದ್ರಪ್ಪ
ಮಂತ್ರಿ, ಮುಪ್ಪಣ್ಣ ಶೀಲವಂತ, ಸಂತೋಷ ನಾಯನೇಗಲಿ, ಸಿದ್ದು
ನಾಯನೇಗಲಿ, ರಜಾಕ ಕುದರಿ, ಮುರ್ತುಜಾ ಮದರಂಗಿ, ರಾಜು
ಪೆಂಡಾರಿ, ರುದ್ರೇಶ ನಾಯನೇಗಲಿ, ಸುರೇಶ ರಂಜಣಗಿ, ಆನಂದ
ತಿಪ್ಪಾ, ಪ್ರಕಾಶ ಕಳ್ಳಿಗುಡ್ಡ, ಮುತ್ತು ಕಳ್ಳಿಗುಡ್ಡ, ಕಾಶೀನಾಥ
ಉಮಚಗಿ ಮತ್ತಿತರರು ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030