ಇಂದಿನಿಂದ ಶರಣರ ಅನುಭಾವ ದರ್ಶನ ಪ್ರವಚನ ಆರಂಭ
ಗುಳೇದಗುಡ್ಡ: ಪಟ್ಟಣದ ಶ್ರೀ. ಜ.ಗುರುಸಿದ್ದ ಪಟ್ಟದಾರ್ಯ
ಸ್ವಾಮಿಗಳ 39ನೇ ವಾರ್ಷಿಕ ಪುಣ್ಯಾರಾಧನೆಯ ಶರಣ ಸಂಗಮ
ಸಮಾರಂಭ ಹಾಗೂ ಶ್ರೀ ಗುರುಬಸವದೇವರ ಸಮಾಜಸೇವಾ
ಗುರುದೀಕ್ಷಾ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ
ಮುಂಡರಗಿಯ ಶ್ರೀ. ಜ. ತೊಂಟದಾರ್ಯ ಮಠದ ಶ್ರೀ.
ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳಿಂದ ಶರಣರ ಅನುಭಾವ
ದರ್ಶನ ಪ್ರವಚನ ಕಾರ್ಯಕ್ರಮ ನ.15ರಿಂದ ಡಿ.15ರ ವರಗೆ
ಪ್ರತಿನಿತ್ಯ ಸಂಜೆ 6 ಗಂಟೆಯಿಂದ 8.30ರ ವರೆಗೆ ಒಂದು ತಿಂಗಳ
ವರೆಗೆ ನಡೆಯಲಿದೆ ಎಂದು ಜ.ಶ್ರೀ. ಗುರುಸಿದ್ದೇಶ್ವರ ಮಠದ
ಶ್ರೀ.ಜ. ಬಸವರಾಜ ಪಟ್ಟದಾರ್ಯ ಸ್ವಾಮಿಗಳು ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ.15ರಂದು ಸಂಜೆ
6 ಗಂಟೆಗೆ ಪ್ರವಚನದ ಉದ್ಘಾಟನಾ ಸಮಾರಂಭ ನಡೆಯಲಿದ್ದು,
ಇಲಕಲ್ಲದ ಚಿತ್ತರಗಿ ಸಂಸ್ಥಾನಮಠದ ಶ್ರೀ ಗುರುಮಹಾಂತ
ಸ್ವಾಮಿಗಳು, ಶಿರೂರು ಮಹಾಂತತೀರ್ಥದ ಡಾ. ಬಸವಲಿಂಗ
ಸ್ವಾಮಿಗಳು, ನಿರಲಕೇರಿಯ ಘನಲಿಂಗ ಸ್ವಾಮಿಗಳು, ಸ್ಥಳೀಯ
ಒಪ್ಪತ್ತೇಶ್ವರ ಮಠದ ಶ್ರೀ ಅಭಿನವ ಒಪ್ಪತ್ತೇಶ್ವರ
ಸ್ವಾಮಿಗಳು, ಹುಚ್ಚೇಶ್ವರ ಮಠದ ಶ್ರೀ ಹೊಳೆಹುಚ್ಚೇಶ್ವರ
ಸ್ವಾಮಿಗಳು, ಮುರುಘಾಮಠದ ಶ್ರೀ ಕಾಶೀನಾಥ ಸ್ವಾಮಿಗಳು,
ಅಮರೇಶ್ವರ ಮಠದ ಡಾ. ನೀಲಕಂಠ ಸ್ವಾಮಿಗಳು,
ಮರಡಿಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು
ಸಮಾರಂಭದ ಸಾನಿಧ್ಯ ವಹಿಸುವರು.
ಈ ಸಂದರ್ಭದಲ್ಲಿ ಶ್ರೀ ಗುರುಬಸವದೇವರು, ಸಂಗನಬಸಪ್ಪ
ಚಿಂದಿ, ನಾಗೇಶಪ್ಪ ಪಾಗಿ, ಸಂಜಯ ಬರಗುಂಡಿ, ಸಿ.ಎಂ. ಚಿಂದಿ,
ವಿರೂಪಾಕ್ಷಪ್ಪ ಅರೂಟಗಿ,
ಅಯ್ಯಪ್ಪವಾಳದಉಂಕಿ, ಸೋಮಶೇಖರ ಕಲ್ಬುರ್ಗಿ, ಸಿದ್ದಪ್ಪ
ಕಲ್ಲೂರ, ಬಸನಗೌಡ ಆಲೂರ, ಶಶಿಧರ ಜಾಲಿಹಾಳ ಮತ್ತಿತರರುಇದ್ದರು…
ವರದಿ.ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030