ಸಂಗೀತ ಒಂದು ಯೋಗವಿದ್ದಂತೆ: ಡಾ. ಬಸುಪಟ್ಟದ
ಗುಳೇದಗುಡ್ಡ: ಮನಸ್ಸಿಗೆ ಮುದ ನೀಡುವ ಸಂಗೀತ
ಆಲಿಕೆಯಿಂದ ಮನುಷ್ಯನ ಮಾನಸಿಕ ಒತ್ತಡ ನಿಗ್ರಹಗೊಂಡು
ಮನಸ್ಸು ಪ್ರಸನ್ನಗೊಳ್ಳುತ್ತದೆ. ಸಂಗೀತ ಯೋಗವಿದ್ದಂತೆ,
ಸಂಗೀತಕ್ಕೆ ರೋಗ ನಿಯಂತ್ರಿಸುವ ಶಕ್ತಿ ಇದೆ. ಸಂಗೀತವನ್ನು
ನಿರಂತರ ಪ್ರಯತ್ನದಿಂದ ಸಿದ್ಧಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ
ಡಾ. ರಾಜಶೇಖರ ಬಸುಪಟ್ಟದ ಹೇಳಿದರು.
ಅವರು ಭಾನುವಾರ ಸಂಜೆ ಪಟ್ಟಣದ ಶ್ರೀ ವಾಸವಿ ದೇವಸ್ಥಾನದಲ್ಲಿ
ವಿಶ್ವಾಸ ಜನಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ
ವತಿಯಿಂದ ಹಮ್ಮಿಕೊಂಡಿದ್ದ ಸಂಗೀತ ಸೌರಭ ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡಿ, ನಾವಿಂದು ಅವಸರ ಮತ್ತು ಒತ್ತಡದ ಬದುಕನ್ನು
ಸಾಗಿಸುತ್ತಿದ್ದೇವೆ. ದಣಿದ ದೇಹಕ್ಕೆ ಸಂಗೀತ ಆಲಿಕೆಯಿಂದ ಮನಸ್ಸಿಗೆ
ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದರು.
ಸಾಹಿತಿ ಡಾ ಸಿಎಂ ಜೋಶಿ ಮಾತನಾಡಿ, ನಮ್ಮ ನಾಡಿನ ಸಂಸ್ಕøತಿ ಸಾರುವ,
ನಮ್ಮ ಬದುಕಿನ ವಿವಿಧ ಮಜಲುಗಳನ್ನು ಮತ್ತು ಇತಿಹಾಸವನ್ನು
ಪ್ರತಿಬಿಂಬಿಸುವ ಜಾನಪದ ಕಲೆ, ಸಂಪ್ರದಾಯ, ಆಚರಣೆ, ಉಡುಗೆ-
ತೊಡುಗೆಗಗಳು, ಸಾಹಿತ್ಯ ಮತ್ತು ಸಂಗೀತ ಇವುಗಳನ್ನು
ಉಳಿಸಿ, ಪೊಷಿಸುವ ಜವಾಬ್ದಾರಿ ನಮ್ಮೆಲರದ್ದಾಗಿದೆ ಎಂದರು.
ಕಸಪಾ ಅಧ್ಯಕ್ಷ ಎಚ್.ಎಸ್. ಘಂಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷ
ಹನುಮಂತಪ್ಪ ಅಗಡಿ, ಸರಕಾರಿ ಬಾಲಕಿಯರ ವಸತಿ ನಿಲಯದ ನಿಲಯ
ಪಾಲಕಿ ರೇಷ್ಮಾ ಕಾತರಕಿ, ರಾಮಣ್ಣ ಬಿಜಾಪುರ, ವಾಸವಿ ಮಹಿಳಾ
ಮಂಡಲ ಅಧ್ಯಕ್ಷೆ ಅನುಪಮಾ ಧಾರವಾಡ, ಬಸವರಾಜ ಸಿಂದಗಿಮಠ,
ಸಂವಾದ ಜಿರಲಿ, ಮೌನೇಶ ಬಡಿಗೇರ, ಸಚಿನ್ ಅಲದಿ, ಶ್ರೀಕಾಂತ್ ಧಾರವಾಡ,
ವೆಂಕಟೇಶ ಧಾರವಾಡ, ಮಂಜು ಧಾರವಾಡ, ಶ್ರೀನಿವಾಸ್ ಬಿಜಾಪುರ,
ರಮೇಶ ಪದಕಿ, ಕುಮಾರ ರಾಠೋಡ, ಬಸವರಾಜ ದಿಂಡಿ, ಬಸವರಾಜ
ಜಿಡಗಿ, ಭೀಮಸಿಂಗ ರಾಠೋಡ, ಸದಾಶಿವಯ್ಯ ಸಿಂದಗಿಮಠ,
ಸಂಗಯ್ಯ ಸಿಂದಗಿಮಠ, ಬಸವರಾಜ ಗೊಬ್ಬಿ ಮತ್ತಿತರರು ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030