ಮರಗಿಡ ರಕ್ಷಣೆ ನಮ್ಮೆಲ್ಲರ ಹೊಣೆ: ಪಿಎಸ್‍ಐ ಯಡಹಳ್ಳಿ
ಗುಳೇದಗುಡ್ಡ: ಇಂದು ನಮ್ಮ ಭೂಮಿಯ ಪರಿಸರ
ಸಾಕಷ್ಟು ಹಾನಿಯಾಗಿದ್ದರಿಂದ ಭೂಮಿಯ ತಾಪಮಾನ ಏರುತ್ತಿದೆ.
ಬರಗಾಲ, ಭಾರಿ ಮಳೆಯಂತಹ ಅವಘಡಗಳು ಹೆಚ್ಚುತ್ತಿವೆ.
ಹೀಗಾಗಿ ನಾವೆಲ್ಲಾ ಪರಿಸರವನ್ನು ಸಂರಕ್ಷಣೆ ಮಾಡಲೇಬೇಕಾದ
ಒತ್ತಡದಲ್ಲಿದ್ದೇವೆ. ಮಣ್ಣಿನ ಸಂರಕ್ಷಣೆ, ಪ್ಲಾಸ್ಟಿಕ್ ತ್ಯಜಿಸುವಿಕೆ,
ಆಮ್ಲಜನಕದ ಕೊರತೆ ಆಗದಂತೆ ಮರಗಿಡಗಳನ್ನು
ಬೆಳೆಸುವ ಕಾರ್ಯ ಮಾಡಬೇಕು ಎಂದು ಪಿಎಸ್‍ಐ ಸಿದ್ದಪ್ಪ ಯಡಹಳ್ಳಿ
ಹೇಳಿದರು.
ಎಬಿವಿಪಿ ವತಿಯಿಂದ ಭಾನುವಾರ ಪಟ್ಟಣದ ಶಿಕ್ಷಕರ ಉದ್ಯಾನವನದ
ಸ್ವಚ್ಛತೆ ಹಾಗೂ ಸಸಿನೆಡುವ ಕಾರ್ಯಕ್ರಮದಲ್ಲಿ ಅವರು
ಮಾತನಾಡಿ, ಪರಿಸರದಲ್ಲಿ ಅಸಮತೋಲನದಿಂದಾಗಿ ಇಂದು ಗರಿಷ್ಠ
ಉಷ್ಣಾಂಶದ ಅನುಭವವ ಪಡೆಯುತ್ತಿದ್ದೇವೆ. ಮುಂದಿನ ಪೀಳಿಗೆ
ಉಳಿಯುವಿಕೆಗೆ ಪರಿಸರದ ಕಾಳಜಿ ವಹಿಸಬೇಕು.
ಗಿಡಮರಗಳನ್ನು ಬೆಳಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎಬಿವಿಪಿ ಪರಿಷತ್‍ನ ವಿಜಯಪುರದ
ಸಂಘಟನಾ ಕಾರ್ಯದರ್ಶಿ ಹರ್ಷಾ ನಾಯಕ, ಜಿಲ್ಲಾ ಸಂಚಾಲಕ
ಪ್ರಥಮೇಶ ವಾಘ್ಮೋರೆ, ಗೌರೀಶ ಪೋತ, ನಗರ ಅಧ್ಯಕ್ಷ
ರವಿ ಉಪ್ಪಾರ, ಅಮಿತ ವಾಳದ, ದೀಪಕ ರಾಠೋಡ, ಈರಣ್ಣ ಹಡಪದ,
ಪವನ ಉಂಕಿ, ಗೌರೀಶ ಅಂಗಡಿ, ಲಕ್ಷ್ಮಣ ಭಜಂತ್ರಿ, ಪ್ರಥಮೇಶ
ಪವಾರ, ಅಪ್ಪುರಾಜ ಚವ್ಹಾಣ, ಪ್ರವೀಣ ರಾಠೋಡ, ಆಕಾಶ ಚವ್ಹಾಣ,
ಶಂಕ್ರಮ್ಮ ಮುರಗೋಡ, ನಾಗರತ್ನಾ ರಂಜಣಗಿ, ಸಂಜನಾ,
ವಿನಾಯಕ ರಾಠೋಡ, ವಿಶಾಲ ದಿಂಡಿ, ಶಶಿಕಾಂತ ಸಿಂದಗಿ ಮತ್ತಿತರರು
ಇದ್ದರು….
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030