ಕನ್ನಡ ಭಾಷೆ ಸಂಸ್ಕೃತಿಯ ಬಗ್ಗೆ ತಾಲೂಕಾ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಸರಿಯಾದುದಲ್ಲ
ಗುಳೇದಗುಡ್ಡ : ಕರ್ನಾಟಕ ಎಂಬ ಹೆಸರು ನಾಮಕರಣ ಮಾಡಿ ೫೦
ವರ್ಷಗಳಾದ ಕಾರಣ ರಾಜ್ಯ ಸರ್ಕಾರ ವರ್ಷ ಪೂರ್ತಿ ಕನ್ನಡ
ಕಾರ್ಯಕ್ರಮ ಎಂದು ಘೋಷಣೆ ಮಾಡಿದೆ. ಆದರೆ
ಗುಳೇದಗುಡ್ಡ ತಾಲೂಕಿನ ತಾಲೂಕು ಆಡಳಿತದ ಅಧಿಕಾರಿಗಳು
ನಾಡ ಹಬ್ಬದ ಸಂಭ್ರಮವನ್ನು ನಿರ್ಲಕ್ಷ್ಯ ಮಾಡಿರುವುದು
ವಿಷಾಧನೀಯವೆಂದು ಭಾಷಾನೀತಿ ತಜ್ಞರ ರಾಜ್ಯ ಸಮಿತಿ ಸದಸ್ಯ ಡಾ.
ಸಣ್ಣವೀರಣ್ಣ ದೊಡ್ಡಮನಿ ತಮ್ಮ ವಿಷಾದ ವ್ಯಕ್ತಪಡಿಸಿದರು.
ಅವರು ಬುಧವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿ,
ತಾಲೂಕು ಆಡಳಿತ ತನ್ನೆಲ್ಲ ಇಲಖೆಗಳ ಸಹಯೋಗದಲ್ಲಿ ನ.೧
ರಂದು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಲಾ,
ಕಾಲೇಜು ವಿದ್ಯಾರ್ಥಿಗಳು,ಶಿಕ್ಷಕರು, ಕನ್ನಡಪರ ಸಂಘಟನೆಗಳು
ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಜ್ರಂಭಣೆಯಿಂದ
ಆಚರಿಸದೇ ಕೇವಲ ನಾಡದೇವಿಯ ಭಾವಚಿತ್ರದ ಮೆರವಣಿಗೆ ಮಾಡಿ
ಮುಗಿಸಿದ್ದು ಇಲ್ಲಿನ ಸಾಹಿತಿ, ಸಂಘಟಕರಿಗೆ ಬೇಸರವುಂಟು ಮಾಡಿದೆ.
ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಸಾಲಾ
ಮಕ್ಕಳ ಕನ್ನಡದ ವಿಷಯ ಕುರಿತಾದ ಚರ್ಚೆ, ಭಾಷಣ, ಪ್ರಬಂಧ,
ಗೀತಗಾಯನ ಹೀಗೆ ಕಾರ್ಯಕ್ರಮ ಏರ್ಪಡಿಸಲಿಲ್ಲ. ಆಗಿರುವ
ಪ್ರಮಾದ ಸರಿಪಡಿಸಿ ಇದೆ ತಿಂಗಳ ೩೦ ರೊಳಗಾಗಿ ಒಂದು ದಿನ
ತಾಲೂಕಿನ ಕನ್ನಡ ನುಡಿ ಸಡಗರವನ್ನು ಅದ್ದೂರಿಯಾಗಿ ಈ
ಮೂಲಕವಾದರೂ ಆಚರಿಸಿ ನುಡಿಸೇವೆ ಮಾಡುವ ಶ್ರಮಿಕ
ಕಲಾವಿದರಿಗೆ, ನುಡಿ ಸೇವೆ ಮಾಡುವ ತಜ್ಞರಿಗೆ ಗೌರವ ಸಲ್ಲಿಸಿದರೆ
ತಮ್ಮ ಆಡಳಿತಕ್ಕೆ ಮೆರುಗು ಹೆಚ್ಚೆತ್ತದೆ ಎಂದರು.
ಹಿರಿಯ ಸಾಹಿತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ
ಅಧ್ಯಕ್ಷ ಡಾ. ಸಿ. ಎಂ. ಜೋಶಿ ಮಾತನಾಡಿ, ನಮ್ಮ ತಾಲೂಕು ಪ್ರಾಚೀನ
ಪರಂಪರೆ ಹೊಂದಿದೆ. ಇಲ್ಲಿನ ಕವಿ ಕಲಾವಿದರು ರಾಷ್ಟçಮಟ್ಟದಲ್ಲಿ
ಹೆಸರು ಗಳಿಸಿದ್ದಾರೆ. ಇಂತಹ ಸಾಂಸ್ಕೃತಿಕ ಹಿರಿಮೆ ಇರುವ ತಾಲೂಕು
ಕೇಂದ್ರದಲ್ಲಿ ಅಧಿಕಾರಿಗಳು ಸಮರ್ಪಕವಾದ ನಿರ್ಧಾರ
ತೆಗೆದುಕೊಳ್ಳದೆ ಕನ್ನಡ ಭಾಷೆ ಸಂಸ್ಕೃತಿಯ ಬಗ್ಗೆ
ನಿರಾಭಿಮಾನಿಗಳಂತೆ ವರ್ತಿಸುತ್ತಿರುವುದು ವಿಷಾದದ ಸಂಗತಿ. ಈ
ತಿಂಗಳು ಕನ್ನಡ ಸಂಭ್ರಮ ಜರುಗಿಸುವಂತೆ ಜವಾಬ್ದಾರಿ
ವಹಿಸಬೇಕೆಂದು ಆಗ್ರಹಿಸಿದರು.
ತಹಸೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ, ಕನ್ನಡ
ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ, ಕಂದಾಯ ಇಲಾಖೆ ಸಚಿವರಿಗೆ,
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮತ್ತು ರಾಜ್ಯ ಕನ್ನಡ ಸಾಹಿತ್ಯ
ಪರಿಷತ್ ಅಧ್ಯಕ್ಷರಿಗೆ ಮನವಿ ರವಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ಡಾ.ಎಚ್.ಎಸ್.ಘಂಟಿ, ಕಸಾಪ ಸದಸ್ಯರಾದ ಮಹಾದೇವ ಜಗತಾಪ,
ಬಸವರಾಜ ಯಂಡಿಗೇರಿ, ಶೇಖರ ರಾಠೋಡ, ಕಿರಣ ಬಾಪ್ರಿ, ಮಹಾಲಿಂಗ
ಯಂಡಿಗೇರಿ, ಕಜಾಪ ತಾಲೂಕು ಅಧ್ಯಕ್ಷ ಬಸವರಾಜ ಸಿಂದಗಿಮಠ,
ಹುಚ್ಚೇಶ ಯಂಡಿಗೇರಿ, ಯಲ್ಲಪ್ಪ ಮನ್ನಿಕಟ್ಟಿ, ಪರಶು ಮಾದರ,
ಗುಂಡಪ್ಪ ಕೋಟಿ ಸೇರಿದಂತೆ ಇನ್ನೂ ಅನೇಕರು ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030