ಕಜಾಪ ಗುಳೇದಗುಡ್ಡ ತಾಲೂಕು ಅಧ್ಯಕ್ಷರಾಗಿ ಬಸವರಾಜ ಸಿಂದಗಿಮಠ ನೇಮಕ
ಗುಳೇದಗುಡ್ಡ: ಕನ್ನಡ ಜಾನಪದ ಪರಿಷತ್ತಿನ
ಗುಳೇದಗುಡ್ಡ ತಾಲೂಕು ಘಟಕದ ಅಧ್ಯಕ್ಷರಾಗಿ ಪಟ್ಟಣದ
ಸಂಗೀತ ಶಿಕ್ಷಕ, ಜಾನಪದ ಕಲಾವಿದ ಬಸವರಾಜ ಸಿಂದಗಿಮಠ
ಅವರನ್ನು ಪರಿಷತ್ತಿನ ರಾಜ್ಯಾಧ್ಯಕ್ಷ ಎಸ್. ಬಾಲಾಜಿ ಅವರ ಶಿಫಾರಸ್ಸಿನ
ಮೇಲೆ ಜಿಲ್ಲಾಧ್ಯಕ್ಷ ಡಿ.ಎಂ. ಸಾಹುಕಾರ ಅವರು ನೇಮಕ ಮಾಡಿ,
ತಾಲೂಕು ಸಮಿತಿಯನ್ನು ರಚಿಸುವಂತೆ ಆದೇಶ ನೀಡಿದ್ದಾರೆ.
ಬಸವರಾಜ ಸಿಂದಗಿಮಠ ಅವರು ಜಾನಪದ ಕಲೆ ಉಳಿಸಿ ಬೆಳೆಸುವ
ನಿಟ್ಟಿನಲ್ಲಿ, ನಾಡಿನಾದ್ಯಂತ ಹಾಗೂ ವಾಹಿನಿಗಳಲ್ಲಿ ಜಾನಪದ
ಕಾರ್ಯಕ್ರಮ ನೀಡಿದ್ದಲ್ಲದೇ, ಅನೇಕ ಸಮ್ಮೇಳನ
ಯಶಸ್ವಿಯಾಗಿ ಮುನ್ನಡೆಸಿಕೊಂಡು, ಕಲಾವಿದರನ್ನು ಸಂಘಟಿಸಿ
ಅವರ ಏಳಿಗೆಗಾಗಿ ಶ್ರಮಿಸುತ್ತಿದ್ದು, ಅವರ ಸಾಧನೆಯನ್ನು
ಪರಿಗಣಿಸಿ ಕನ್ನಡ ಜಾನಪದ ಪರಿಷತ್ತಿನ ಗುಳೇದಗುಡ್ಡ
ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಮಾಡಲಾಗಿದೆ
ಎಂದು ಜಿಲ್ಲಾಧ್ಯಕ್ಷ ಡಿ.ಎಂ.ಸಾಹುಕಾರ ತಿಳಿಸಿದ್ದಾರೆ…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030