ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ತುಲಾಭಾರ, ಭಾವಚಿತ್ರದ ಮೆರವಣಿಗೆ, 14ನೇ ವರ್ಷದ ಸ್ಮರಣಾಂಜಲಿ…
ಪುಟ್ಟರಾಜರು ಅಂಧರ ಬಾಳಿಗೆ ಬೆಳಕು: ಡಾ.ಕಲ್ಲಯ್ಯಜ್ಜ
ಗುಳೇದಗುಡ್ಡ: ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರು ಅಂಧ, ಅನಾಥರ ಬಾಳಿಗೆ ಬೆಳಕಾಗಿ ನಿಂತವರು. ರಾಜ್ಯದ ಸಾಕಷ್ಟು ಅಂಧ, ಅನಾಥ ಕಲಾವಿದರಿಗೆ ಆಶ್ರಯ ನೀಡಿ ಅವರ ಬಾಳಿಗೆ ಬೆಳಕಾಗಿ ನಿಂತು ಅವರ ಪೋಷಣೆ ಮಾಡಿದ್ದಾರೆ. ಅಂಥ ಮಹಾನ ವ್ಯಕ್ತಿ ಈ ಸಮಾಜದ ಆಶಾಕಿರಣರಾಗಿದ್ದಾರೆ ಎಂದು ಗದಗ ಶ್ರೀ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯಜ್ಜನವರು ಹೇಳಿದರು.
ಅವರು ಸಮೀಪದ ಹಂಸನೂರ ಗ್ರಾಮದಲ್ಲಿ ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಸೇವಾ ಸಮಿತಿ ವತಿಯಿಂದ ರವಿವಾರ ಹಮ್ಮಿಕೊಂಡ 14ನೇ ವರ್ಷದ ಸ್ಮರಣಾಂಜಲಿ, ಭಾವಚಿತ್ರದ ಮೆವರಣಿಗೆ ಹಾಗೂ ಪೂಜ್ಯರ ತುಲಾಭಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಪುಟ್ಟರಾಜ ಗವಾಯಿಗಳ ಸ್ಮರಣೆ ನಮ್ಮ ಬದುಕನ್ನು ಪಾವನಗೊಳಿಸುತ್ತದೆ. ಗವಾಯಿಗಳ ಆಶ್ರಮದಲ್ಲಿ ನೆಲೆಸಿ ಬದುಕು ಕಟ್ಟಿಕೊಂಡ ಲಕ್ಷಾಂತರ ಅಂಧ, ಅನಾಥ ಸಂಗೀತ ಕಲಾವಿದರು ರಾಜ್ಯ, ದೇಶದ ಉದ್ದಗಲದಲ್ಲಿ ತಮ್ಮ ಬದುಕು ನಡೆಸುತ್ತಿದ್ದಾರೆ ಎಂದರು.
ಹಂಸನೂರ ಶಿವಾನಂದ ಮಠದ ಅಭಿನವ ಬಸವರಾಜೇಂದ್ರ ಶ್ರೀಗಳು, ಹಲಕುರ್ಕಿ ದಿಗಂಬರೇಶ್ವರ ಮಠದ ಷಡಕ್ಷರಯ್ಯ ಸ್ವಾಮಿಗಳು, ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು, ಕನ್ನೂರಮಠದ ವೀರರಾಜೇಂದ್ರ ಸ್ವಾಮಿಗಳು, ತೆಗ್ಗಿ ಶ್ರದ್ಧಾನಂದ ಮಠದ ವಿದ್ಯಾನಂದ ಸ್ವಾಮಿಗಳು, ಹೇಮರಾಜ ಶಾಸ್ತ್ರಿಗಳು ಮಾತನಾಡಿದರು.
ಇದೇ ಸಂದರ್ಭದಲ್ಲಿ ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ತುಲಾಭಾರ ಕಾರ್ಯಕ್ರಮ ಹಂಸನೂರು ಹಾಗೂ ಸುತ್ತಲಿನ ಗ್ರಾಮಸ್ಥರು ಬಹಳಷ್ಟು ಅರ್ಥಪೂರ್ಣವಾಗಿ ನೆರವೇರಿಸಿದರು. ಇದಕ್ಕೂ ಮೊದಲು ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಭಾವಚಿತ್ರದ ಮೆರವಣಿಗೆ ಪಟ್ಟಣದಲ್ಲಿ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಮೈಲಾರಲಿಂಗೇಶ್ವರ ಸಂಘದ ಅಧ್ಯಕ್ಷ ಮಹೇಶ ಹೊಸಗೌಡರ, ಹಂಸನೂರ ಗ್ರಾಪಂ ಅಧ್ಯಕ್ಷೆ ಆಶಾ ಚಿಂತಾಕಲ್ಲ, ಶಾಸಕರ ಆಪ್ತ ಸಹಾಯಕ ಪ್ರಭು ಕುಂಬಾರ, ಮಂಜುನಾಥ ಅರಳಿಟ್ಟಿ, ಎಂ.ಎಸ್.ಗುಡಿಸಾಗರ, ಉಮೇಶ ಮುಗ್ಗಜೋಳ, ಅಶೋಕ ಮರಾಠೆ, ಬಸವರಾಜ ಕುಂಬಾರ, ಭೀಮಸಿ ಚಿಮ್ಮಲ, ಶ್ರೀನಿವಾಸ ಚಿಂತಾಕಲ್ಲ, ಶೇಖರ ಚಿಂತಾಕಲ್ಲ, ಸುರೇಶ ಚಿಮ್ಮಲ, ಶಬ್ಬಿರ ನಾಯಕ ಇತರರು ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030