ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಾಣ
ಗುಳೇದಗುಡ್ಡ: ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ
ಸೇವಾ ಸಮಿತಿ ವತಿಯಿಂದ ಸ್ಥಳೀಯ ಗ್ರಾಮದೇವತೆ ಶ್ರೀ
ಮೂಕೇಶ್ವರಿ ದೇವಸ್ಥಾನದ ಹತ್ತಿರ ಶ್ರೀ ಅಯ್ಯಪ್ಪಸ್ವಾಮಿಯ
ಭವ್ಯ ದೇವಸ್ಥಾನವನ್ನು ನಿರ್ಮಿಸಲು ಜಾಗವನ್ನು ಖರೀದಿಸಲಾಗಿದ್ದು,
ಪಟ್ಟಣದ ಅಯ್ಯಪ್ಪಸ್ವಾಮಿಯ ಎಲ್ಲ ಆರು ಸನ್ನಿಧಾನದ
ಗುರುಸ್ವಾಮಿಗಳು, ಹಿರಿಯರ ಸಹಯೋಗದಲ್ಲಿ
ಅಯ್ಯಪ್ಪಸ್ವಾಮಿಯ ಭವ್ಯ ದೇವಸ್ಥಾನ ನಿರ್ಮಾಣವಾಗಲಿದೆ ಎಂದು
ಅಯ್ಯಪ್ಪಸ್ವಾಮಿ ದೇವಸ್ಥಾನ ಸೇವಾ ಸಮಿತಿ ಗೌರವಾಧ್ಯಕ್ಷ ನಿಂಗಪ್ಪ
ಯಣ್ಣಿ ಹೇಳಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಪಟ್ಟಣದ ಪ್ರಥಮ
ಮಾಲಾಧಾರಿ ದಿ.ಮೋಹನ ಹುನಗುಂದ ಅವರು ಪಟ್ಟಣದಲ್ಲಿ ಶ್ರೀ
ಅಯ್ಯಪ್ಪಸ್ವಾಮಿ ದೇವಸ್ಥಾನದ ನಿರ್ಮಾಣಕ್ಕೆ ಕನಸುಕಂಡಿದ್ದರು
ಅವರ ಆಸೆಯಂತೆ ದೇವಸ್ಥಾನ ನಿರ್ಮಾಣವಾಗಲಿದ್ದು, ಶೀಘ್ರದಲ್ಲಿ
ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಲಿದೆ
ಎಂದರು.
ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಸೇವಾ ಸಮಿತಿ
ಗೌರವಾಧ್ಯಕ್ಷ ವಿರುಪಾಕ್ಷಪ್ಪ ನಿಲೂಗಲ್, ಅಧ್ಯಕ್ಷ ಶಂಕರ
ಕಟಗೇರಿ, ಕಾರ್ಯಾಧ್ಯಕ್ಷ ರಾಘವೇಂದ್ರ ಪತ್ತಾರ,
ಉಪಾಧ್ಯಕ್ಷರಾದ ರಾಚಯ್ಯ ಸ್ಥಾವರಮಠ, ಮುತ್ತಪ್ಪ ಮಸಳಿ,
ಪ್ರಧಾನಕಾರ್ಯದರ್ಶಿ ಮಲ್ಲಿಕಾರ್ಜುನ ಮದ್ದಾನಿ, ಅಮರೇಶ
ಹಂದ್ರಾಳ, ದತ್ತಾತ್ರೇಯ ಅಂಬೋರೆ, ಮಲ್ಲಿಕಾರ್ಜುನ
ಹುನಗುಂದ, ಅನಿಲ ಕಲಾಲ, ಗಣೇಶ ಘಂಟಿ, ಮಲ್ಲೇಶ ಕಲಾಲ,
ಲೋಕೇಶ ಪತ್ತಾರ, ಅಶೋಕ ಗೌಡರ ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030