ಇಂದಿನ ನಮ್ಮ ಜೀವನ ಪದ್ಧತಿಯಿಂದ ಬಂಜೆತನ: ಡಾ ಬಂಟನೂರ
ಗುಳೇದಗುಡ್ಡ: ನಾವು ಸೇವಿಸುವ ಆಹಾರ, ಅದನ್ನು ಸೇವಿಸುವ
ಕ್ರಮ, ಅಶುದ್ಧ ಗಾಳಿ, ನೀರು, ಇಂದಿನ ಯಾಂತ್ರಿಕೃತ ಯುಗದ
ಜೀವನ ಪದ್ಧತಿ, ಒತ್ತಡದಲ್ಲಿ ಬದುಕುವ ಜೀವನ, ಸಕಾಲದಲ್ಲಿ
ನಡೆಯದ ಮದುವೆ ಮತ್ತಿತರ ಕಾರಣಗಳಿಂದಾಗಿ ಬಂಜೆತನ
ಉಂಟಾಗುತ್ತದೆ ಎಂದು ಡಾ. ಬಸವರಾಜ ಬಂಡನೂರ ಹೇಳಿದರು.
ಅವರು ರವಿವಾರ ಪಟ್ಟಣದ ಡಾ.ಬಸವರಾಜ ಬಂಟನೂರ ಅವರ
ಬನಶಂಕರಿ ಆಸ್ಪತ್ರೆ ಹಾಗೂ ಡಾ. ಸಂಧ್ಯಾ ಮಿಶ್ರಾ ಅವರ
ಬೆಂಗಳೂರಿನ ಮಿಲನ್ ಫರ್ಟಿಲಿಟಿ ಆಸ್ಪತ್ರೆ ಸಹಯೋಗದೊಂದಿಗೆ
ಸ್ಥಳೀಯ ಬನಶಂಕರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಬಂಜೆತನ
ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಬಂಜೆತನ ನಿವಾರಣಗೆ
ಸೂಕ್ತ ರೀತಿಯಲ್ಲಿ ತಂತ್ರಜ್ಞಾನದ ಮೂಲಕ ಸುಮಾರು 19
ವರ್ಷಗಳ ಅನುಭವವನ್ನು ಹೊಂದಿರುವ ಡಾ.ಸಂಧ್ಯಾ ಮಿಶ್ರಾ
ಅವರು ಗುಳೇದಗುಡ್ಡ ಸುತ್ತಲಿನ ಹಳ್ಳಿಗಳಿಗೆ ಜನರಿಗೆ ತಮ್ಮ
ಸೇವೆ ನೀಡಲು ಬಂದಿರುವುದು ಶ್ಲಾಘನೀಯ. ಹೆಚ್ಚಿನ ದಂಪತಿಗಳು
ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಿಬಿರದಲ್ಲಿ ಸುಮಾರು 30 ಕ್ಕೂ ಹೆಚ್ಚು ದಂಪತಿಗಳು
ಭಾಗವಹಿಸಿದ್ದರು. ಅವರಿಗೆ ಸಮಾಲೋಚನೆ ನಡೆಸಿ, ಸೂಕ್ತ ಚಿಕಿತ್ಸೆ
ಪಡೆದುಕೊಂಡರು.
ಶಿಬಿರದಲ್ಲಿ ಡಾ. ಸಂಧ್ಯಾ ಮಿಶ್ರಾ, ಸಂಸ್ಥೆಯ ಅಧಿಕಾರಿ ಮಂಜುನಾಥ
ಎಚ್. ಕೆ, ಲಾಲಸಾಬ ನದಾಫ್, ನೂರೇಶ ನಿಡಗುಂದಿ, ಶಿವು ಉದ್ನೂರ,
ಖಾಜಾಮೈನುದ್ದೀನ ಸಿರಸಂಗಿ, ಸಿದ್ದು ನಿಡಗುಂದಿ ಸೇರಿದಂತೆ
ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು..
ವರದಿ..ಸಚಿನ್ ಬಾಗಲಕೋಟ ಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030