ನೌಕರ ಸಂಘಕ್ಕೆ 28 ಲಕ್ಷ ರೂ. ಲಾಭ
ಗುಳೇದಗುಡ್ಡ : ಸಂಘದ ಸರ್ವ ಸದಸ್ಯರ ಹಾಗೂ ಆಡಳಿತ
ಮಂಡಳಿಯ ಸಹಕಾರ ಹಾಗೂ ಗ್ರಾಹಕರು,ಶೇರುದಾರರ
ವಿಶ್ವಾಸದಿಂದಾಗಿ 2023-24 ನೇ ಸಾಲಿನಲ್ಲಿ ಗುಳೇದಗುಡ್ಡ ತಾಲೂಕು
ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಪತ್ತಿನ ಸಹಕಾರ ಸಂಘ
ಈಗ ನೂರು ವರ್ಷಗಳನ್ನು ಪೂರೈಸಿ ಅಭಿವೃದ್ಧಿಯ ಪಥದಲ್ಲಿ
ಸಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸಂಘವು 28 ಲಕ್ಷ 35 ಸಾವಿರ ನಿವ್ವಳ
ಲಾಭಗಳಿಸಿದ್ದು ಶೇರುದಾರರಿಗೆ ಶೇ. 9ರಷ್ಟು ಡಿವಿಡೆಂಡ್ ನೀಡಲಾಗಿದೆ
ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಸಹಕಾರ ಸಂಘದ
ಅಧ್ಯಕ್ಷ ಎಸ್.ಬಿ. ಪಟ್ಟಣಶೆಟ್ಟಿ ಹೇಳಿದರು .
ಅವರು ಇಲ್ಲಿನ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ
100ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಘದಲ್ಲಿ 322
ಸದಸ್ಯರನ್ನು ಹೊಂದಿದ್ದು, 2,29,929,00 ರೂ ಶೇರು ಬಂಡವಾಳ
ಹೊಂದಿದ್ದು, 6,11,12,468 ರೂ, ದುಡಿಯುವ ಬಂಡವಾಳ ಹೊಂದಿದೆ
ಎಂದರು.
ತಾಲೂಕು ಶಿಕ್ಷಣ ಸಂಯೋಜಕ ಎಂ.ಸಿ. ನಾಲತವಾಡ ಮಾತನಾಡಿ, ಒಂದು
ಸಂಘ ಬೆಳೆಯಬೇಕಾದರೆ ಪಡೆದುಕೊಂಡ ಸಾಲವನ್ನು
ಸಕಾಲದಲ್ಲಿ ಮರಳಿಸಿದಾಗ ಸಂಘ ಅಭಿವೃದ್ಧಿ ಹೊಂದಲು
ಸಾಧ್ಯವಾಗುತ್ತದೆ. ಸಂಘ ಹುಟ್ಟಿ ಈಗ 100 ವರ್ಷ ಪೂರ್ಣಗೊಂಡಿದೆ
ಪ್ರತಿಯೊಬ್ಬ ಸದಸ್ಯರ, ನಿರ್ದೇಶಕರ ಪ್ರಾಮಾಣಿಕ ಪ್ರಯತ್ನದ
ಫಲವಾಗಿ ಸಂಘ ಉತ್ತಮವಾಗಿ ಬೆಳೆಯುತ್ತಿದೆ. ಸಂಘದ
ಬೆಳವಣಿಗೆಯಲ್ಲಿ ಪ್ರತಿಯೊಬ್ಬ ಶೇರುದಾರರ ಪಾತ್ರ
ಮಹತ್ವದ್ದಾಗಿರುತ್ತದೆ ಎಂದು
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಹಾಗೂ
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಎಸ್. ಮಜ್ಜಗಿ,
ಸಿ.ಆರ್.ಪಿ. ರಮೇಶ ಬುಳ್ಳಾ, ರಾಜಶೇಖರ ಹುನಗುಂದ, ರಾಮಚಂದ್ರ
ಬಾಪಟ್, ಭಾಗೀರತಿ ಆಲೂರು, ಸಂಘದ ಉಪಾಧ್ಯಕ್ಷ ಕೆ.ಎಂ.ನಿಲುಗಲ್,
ವಿ.ಪಿ.ದಾಸರ, ಎಸ್.ವಿ.ಎಲಿಗಾರ, ವಿ. ಆರ್. ಹುಳಪಲ್ಲೇದ, ಎಚ್.ಎನ್. ನೆರಕಿ,
ಎನ್.ಎಂ.ಚಿತ್ತರಗಿ, ಎನ್.ಟಿ. ನಿಡಗುಂದಿ, ಎಸ್.ಬಿ. ಹಡಪದ, ಎಂ. ಓ.
ಸುರಪುರ, ಎಸ್.ಎಂ. ಪಾಟೀಲ್, ಎಂ.ಎಂ.ಮಾಶಾಳ, ವಿ. ಎ. ಲೆಂಕೆನ್ನವರ್, ಡಿ.ಬಿ.
ನಾಯ್ಕರ್, ಜೆ.ಎಲ್.ಸಿಂಗದ, ಪಿ.ವಿ. ಜಾಧವ್, ಸಂಘದ ಗೌರವ ಕಾರ್ಯದರ್ಶಿ
ಯಲ್ಲಪ್ಪ ತಳವಾರ, ಘಂಟೇಶ ಕಲಬುರ್ಗಿ, ಸಂಗಮೇಶ್ ರಂಜನಗಿ ಇತರರು ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030