ಭಾವಿಯನ್ನು ಸ್ವಚ್ಛಗೊಳಿಸುಂತೆ ಆಗ್ರಹ
ಗುಳೇದಗುಡ್ಡ: ಪಟ್ಟಣದ ಹೊಸಪೇಟೆ ಓಣಿಯ ವಾರ್ಡ 6ರಲ್ಲಿನ
ಬೋಸಗೆರ ಭಾವಿ ಕಸಕಡ್ಡಿ ತುಂಬಿಕೊಂಡು ಮಲೀನವಾಗಿ
ದುರ್ವಾಸನೆ ಬೀರುತ್ತಿದ್ದು, ಭಾವಿಯನ್ನು ಸ್ವಚ್ಛಗೊಳಿಸುವಂತೆ
ಆಗ್ರಹಿಸಿ ಸ್ಥಳೀಯ ಗುರುಶ್ರೀ ಮಹಿಳಾ ಸಂಘದ ವತಿಯಿಂದ
ಬುಧವಾರ ಪುರಸಭೆ ಮ್ಯಾನೇಜರ್. ಎ.ಎಚ್. ಮುದ್ದೇಬಿಹಾಳ ಅವರಿಗೆ
ಮನವಿ ಸಲ್ಲಿಸಲಾಯಿತು.
ಭಾವಿ ನೀರು ಮಲೀನಗೊಂಡಿದ್ದಿಂದ ಸೊಳ್ಳೆಗಳ ಕಾಟ ಮೀತಿ ಮೀರಿವೆ.
ನೀರಿನ ದುರ್ವಾಸನೆಯಿಂದ ಭಾವಿಯ ಸುತ್ತಮುತ್ತ ವಾಸಿಸುವ ಜನರಿಗೆ
ತೊಂದರೆ ಉಂಟಾಗಿದೆ. ಕೂಡಲೇ ಭಾವಿಯನ್ನು
ಸ್ವಚ್ಛಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭಲ್ಲಿ ಮಹಿಳಾ ಸಂಘದ ಅಧ್ಯಕ್ಷೆ ದಾನಮ್ಮ ಕಲ್ಯಾಣಿ, ಲಲಿತಾ
ಬಣಗಾರ, ಸುಜಾತಾ ಭಗವತಿ, ಸಾವಿತ್ರಿ ವಾಳದಉಂಕಿ, ಶಾರದಾ
ಮುರನಾಳ, ಪುಪ್ಪಾ ಕರನಾಲಿಗೆ, ಎನ್.ಆರ್. ದೊಡಮನಿ, ಕವನಾ
ಲಾಯದಗುಂದಿ, ಶೃತಿ ಸಿಂದಗಿಮಠ, ಶಕುಂತಲಾ ಸಿಂದಗಿಮಠ,
ಗಾಯತ್ರಿ ತೆಗ್ಗಿ, ಶೈಲಾ ಕವಡಿಮಟ್ಟಿ, ಶಂಕರ ಬಸುಪಟ್ಟದ
ಮತ್ತಿತರರು ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030