ಆದರ್ಶ ವಿದ್ಯಾಲಯ: ಜಾನಪದ ನೃತ್ಯದಲ್ಲಿ ಪ್ರಥಮ
ಬಾದಾಮಿ: ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಬಾಗಲಕೋಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಬಾದಾಮಿ ವತಿಯಿಂದ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಸಮೀಪದ ಚಿಕ್ಕಮುಚ್ಚಳಗುಡ್ಡದ ಸರಕಾರಿ ಆದರ್ಶ ವಿದ್ಯಾಲಯದ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸೌಭಾಗ್ಯ ಪ್ಟಟಣದ ಮತ್ತು ಸಂಗಡಿಗರು ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿಪ್ರಭಾರಿ ಪ್ರಾಚಾರ್ಯ ಶಂಕರರಾವ್ ಕುಲಕರ್ಣಿ, ಸಂಗೀತ ಶಿಕ್ಷಕ ಬಸವರಾಜ ಸಿಂದಗಿಮಠ, ಬಸವರಾಜ ಚಿಕ್ಕನ್ನವರ, ಶ್ರೀನಿವಾಸ ಈಳಗೇರ, ಭಾಗ್ಯಲಕ್ಷ್ಮಿ ಟಿ.ಎಚ್., ರಮೇಶ ಕತ್ತಿಕೈ, ದುರ್ಗಾ ಬಿ., ಹನುಮಂತ ಬಂಡಿವಡ್ಡರ, ವಿರೇಶ ಮರಿಗೌಡರ ಮತ್ತಿತರರು ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030