ಪಿಕೆಪಿಎಸ್‍ನಿಂದ ರೈತರಿಗೆ ಆರ್ಥಿಕ ಶಕ್ತಿ: ಶಾಸಕ ಚಿಮ್ಮನಕಟ್ಟಿ
ಗುಳೇದಗುಡ್ಡ: ಗ್ರಾಮೀಣ ಭಾಗದಲ್ಲಿ ರೈತರಿಗೆ ಆರ್ಥಿಕ ಶಕ್ತಿ ತುಂಬಲು ಪ್ರಾಥಮಿಕ ಕೃಷಿ ಸಂಘಗಳು ಸಹಕಾರಿಯಾಗಿವೆ. ಸರಕಾರಿಂದ ದೊರೆಯವ ಸೌಲಭ್ಯಗಳನ್ನು ನೇರವಾಗಿ ರೈತರಿಗೆ ತಲುಪಿಸಲು ಈ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ರೈತರು ಇವುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಮಂಗಳವಾರ ಸಮೀಪದ ಹಳದೂರು ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನವೀಕರಣಗೊಂಡ ಕಟ್ಟಡ ಉದ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ರಾಮಯ್ಯನವರು ಹಿಂದೆ ಪ್ರಾಥಮಿಕ ಕೃಷಿ ಸಹಕಾರಿ ಸಂಘದಲ್ಲಿ ಸಾಲ ಮಾಡಿದ್ದ ರೈತರ ಸಾಲವನ್ನು ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗಿದ್ದರು. ರೈತರು ಆರ್ಥಿಕವಾಗಿ ಸಬಲರಾಗಲು ಸಂಘಗಳು ಸಹಕಾರಿಯಾಗಿದ್ದು, ಸಂಘದ ಸದಸ್ಯರು ರೈತರಿಗೆ ಸರಕಾರ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದರು.
ರಾಜ್ಯ ಸಹಕಾರ ಭಾರತಿ ಅಧ್ಯಕ್ಷ, ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಕಳೆದಬಾರಿ ಸಹಕಾರಿ ಸಂಘಕ್ಕೆ ಒಂದು ಸಚಿವಾಲಯವನ್ನು ಸೃಷ್ಟಿಸಿ, ಹೊಸ ನೀತಿಯನ್ನು ಜಾರಿಗೆ ಮಾಡುವ ಮೂಲಕ ಸಹಕಾರಿ ಸಂಘಗಳ ಮೂಲಕ ಪೆಟ್ರೋಲ್ ಪಂಪ್, ಗ್ಯಾಸ್ ಏಜೆನ್ಸಿ, ಶಿಕ್ಷಣ ಸಂಸ್ಥೆ ಔಷಧಲಾಯ, ಗೊಬ್ಬರ ಅಂಗಡಿ ಮತ್ತಿತ್ತರ ಸಹ ಉದ್ಯೋಗವನ್ನು ಮಾಡುವ ಮೂಲಕ ಸಂಘದ ಬೆಳವಣೆಗೆ ಸರಕಾರ ಸಾಕಷ್ಟು ಅನುಕೂಲ ಮಾಡಿದೆ ಎಂದರು.
ಒಪ್ಪತ್ತೇಶ್ವರ ಮಠದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ತಿಪ್ಪಣ್ಣ ಗೌಡರ, ಲಕ್ಷ್ಮೀಬ್ಯಾಂಕ್‍ನ ಉಪಾಧ್ಯಕ್ಷ ಕಮಲಕಿಶೋರ ಮಾಲಪಾಣಿ, ಮಹೇಶ ಹೊಸಗೌಡರ, ಪಿಕೆಪಿಎಸ್ ಉಪಾಧ್ಯಕ್ಷ ಬೈಲಪ್ಪ ಗಾಬಿನ, ನಿರ್ದೇಶಕರಾದ ಯೋಗಪ್ಪ ಕೊಟ್ನಳ್ಳಿ, ಲಕ್ಷ್ಮಪ್ಪ ರೆಡ್ಡೇರ, ಶ್ರೀಕಾಂತ ವಾಲೀಕಾರ, ರಾಮನಗೌಡ ಗೌಡರ, ಹನಮಪ್ಪ ನಿಂಬಲಗುಂದಿ, ಗುರುರಾಜ ಅಂಗಡಿ, ಪಾರ್ವತೆವ್ವ ಬನ್ಹಟ್ಟಿ, ಹನಮವ್ವ ಕುರಿ, ಯಮನಪ್ಪ ವಾಲ್ಮೀಕಿ, ಲಕ್ಷ್ಮಪ್ಪ ಮಾದರ, ಸಂಘದ ಕಾರ್ಯನಿರ್ವಾಹಕ ರವಿ ಗೌಡರ ಮತ್ತಿತರರು ಇದ್ದರು….
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030