ಮನೆ ಮನೆಗೆ ನೀರಿನ ಸಂಪರ್ಕ, ಒಳಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಮನವಿ
ಗುಳೇದಗುಡ್ಡ: ಗುಳೇದಗುಡ್ಡ ತಾಂಡಾದಲ್ಲಿ ಸುಮಾರು 800 ಜನರು ಇಲ್ಲಿ ವಾಸವಾಗಿದ್ದು, ಇಲ್ಲಿನ ಜನರಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಒಳಚರಂಡಿ ವ್ಯವಸ್ಥೆ ಇಲ್ಲ. ಸೌಲಭ್ಯ ಕಲ್ಪಿಸುವಂತೆ ಹಲವಾರು ಬಾರಿ ಪುರಸಭೆಗೆ ಮನವಿ ಮಾಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಕೂಡಲೇ ಮನೆ ಮನೆಗೆ ನೀರು ಹಾಗೂ ಒಳಚರಂಡಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ತಾಂಡದ ನಿವಾಸಿಗಳು ಪುರಸಭೆ ಮ್ಯಾನೇಜರ ಎ.ಎಚ್. ಮುದ್ದೇಬಿಹಾಳ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
2009ರ ನೆರೆಹಾವಳಿಯಿಂದ ಮನೆಕಳೆದುಕೊಂಡ ಗುಳೇದಗುಡ್ಡ ತಾಂಡಾದ ಜನರಿಗೆ ಪಟ್ಟಣದ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿ ನೆಲೆ ನೀಡಿ ಸುಮಾರು 80 ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು, ಇಲ್ಲಿ ಒಂದು ಸುಸಜ್ಜಿತ ಕುಡಿಯುವ ನೀರು ಪೂರೈಕೆಗಾಗಿ ಓವರ್‍ಟ್ಯಾಂಕ್ ನಿರ್ಮಿಸಲಾಗಿತ್ತು. ಆದರೆ ಮನೆಗಳಿಗೆ ನಳದ ವ್ಯವಸ್ಥೆ ಮಾಡಿಲ್ಲ. ಒಳಚರಂಡಿ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಕೂಡಲೇ ಮನೆ ಮನೆಗೆ ನೀರಿನ ವ್ಯವಸ್ಥೆ ಹಾಗೂ ಒಳಚರಂಡಿ ವ್ಯವಸ್ಥೆ ಮಾಡಬೇಕು ಇಲ್ಲವಾದಲ್ಲಿ ಪುರಸಭೆ ಕಾರ್ಯಲಯಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಅರುಣ ಚವ್ಹಾಣ, ಎಸ್.ಆರ್. ಚವ್ಹಾಣ, ಮುತ್ತು ಚವ್ಹಾಣ, ಮುತ್ತಪ್ಪ ನಾಯಕ, ಮಹೇಶ ಸೂಳಿಭಾವಿ, ರಮೇಶ ಕಾರಭಾರಿ, ನಟರಾಜ ರಾಠೋಡ, ಅರವಿಂದ ಚವ್ಹಾಣ, ಹನಮಂತ ರಾಠೋಡ, ಮಹಾಂತೇಶ ಹಿರೇಮಠ, ಹನಮಂತ ರಾಠೋಡ, ಅರ್ಜುನ ರಾಠೋಡ, ಸಂತೋಷ ಚವ್ಹಾಣ, ಪ್ರಕಾಶ ಚವ್ಹಾಣ, ಸಂಗಪ್ಪ ಚಟ್ಟೇರ, ವಿಜಯ ರಾಠೋಡ, ರಾಜು ಚವ್ಹಾಣ, ವಿಜಯ ರಾಠೋಡ ಮತ್ತಿತರರು ಇದ್ದರು,ಗುಳೇದಗುಡ್ಡ ತಾಂಡದಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದರು…
ವರದಿ, ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030