ಬಸವರಾಜಗೆ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ
ಗುಳೇದಗುಡ್ಡ : ಧಾರವಾಡದ ಚೇತನ್ ಪೌಂಡೇಶನ್ ಕರ್ನಾಟಕ ಸೋಶಿಯಲ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಪಂ. ಪುಟ್ಟರಾಜ ಗವಾಯಿಗಳವರ 14ನೇ ಪುಣ್ಯಸ್ಮರಣೆ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ರವಿವಾರ ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡಮಾಡಲ್ಪಡುವ ಡಾ. ಪಂ. ಪುಟ್ಟರಾಜ ಕವಿ ಗವಾಯಿ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿಯನ್ನು ಪಟ್ಟಣದ ಸಂಗೀತ ಶಿಕ್ಷಕ, ಚಂದನವಾಹಿನಿಯ ಗಾನಗರಡಿ ಕಲಾವಿದ ಬಸವರಾಜ ಸಿಂದಗಿಮಠ ಅವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿಯ ತೆರಿಗೆ ಅಧಿಕಾರಿ ಸುರೇಶ ಕೋರಕೊಪ್ಪ, ಸಾಹಿತಿ ಆರ್.ಕೆ. ಭಾಗವಾನ, ಡಾ. ಮಹೇಶ ರುದ್ರಕರ, ಲೇಖಕ ಸಿದ್ದು ಸಾವಳಸಂಗ, ಪೀರಸಾಬ ನದಾಫ, ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ, ಡಾ. ಶ್ರೀಕಾಂತ ಚಿಮ್ಮಲ ಇದ್ದರು,ಗುಳೇದಗುಡ್ಡ ಪಟ್ಟಣದ ಸಂಗೀತ ಶಿಕ್ಷಕ, ಚಂದನವಾಹಿನಿಯ ಗಾನಗರಡಿ ಕಲಾವಿದ ಬಸವರಾಜ ಸಿಂದಗಿಮಠ ಅವರಿಗೆ ಧಾರವಾಡದ ಚೇತನ್ ಪೌಂಡೇಶನ್ ಕರ್ನಾಟಕ ಸೋಶಿಯಲ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಪಂ. ಪುಟ್ಟರಾಜ ಕವಿ ಗವಾಯಿ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಯಿತು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030