ಹಾದಿಬಸವೇಶ್ವರ ರಥದ ದುರಸ್ತಿಗೆ ಚಾಲನೆ..
ಗುಳೇದಗುಡ್ಡ: ಪಟ್ಟಣದ ಹಾದಿ ಬಸವೇಶ್ವರ ದೇವಸ್ಥಾನದ ರಥವು ಶಿಥಿಲಗೊಂಡ ಹಿನ್ನಲೆಯಲ್ಲಿ ಬುಧವಾರ ರಥಕ್ಕೆ ಪೂಜೆ ಸಲ್ಲಿಸಿ, ದುರಸ್ತಿಗೆ ಚಾಲನೆ ನೀಡಲಾಯಿತು. ಸುಮಾರು 77 ವರ್ಷ ಹಳೆಯದಾದ ಈ ಹಾದಿಬಸವೇಶ್ವರ ದೇವಸ್ಥಾನದ ರಥವನ್ನು ಪ್ರಥಮ ಬಾರಿಗೆ ದೇಶಕ್ಕೆ ಸ್ವಾತಂತ್ರ್ಯ ದೊರೆತ 15 ಆಗಷ್ಟ 1947ರಂದು ಎಳೆಯಲಾಗಿದ್ದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಅಶೋಕ ಹೆಗಡೆ, ಕಾರ್ಯದರ್ಶಿ ಮಲ್ಲಿಕಾರ್ಜುನ ಬೆಣ್ಣಿ, ರಾಚಪ್ಪ ಅಣ್ಣಿಗೇರಿ, ಮಲ್ಲೇಶಪ್ಪ ಕೆಲೂಡಿ, ನೂರಂದಪ್ಪ ಮದ್ದಾನಿ, ಮುತ್ತಣ್ಣ ಲಗಳಿ, ವಿ.ಎಂ. ಗಾಣಿಗೇರ, ವಿರುಪಾಕ್ಷಪ್ಪ ಹೆಗಡೆ, ಹನಮಂತಪ್ಪ ಹುನಗುಂದ, ಈರಣ್ಣ ಬಂಡಿವಡ್ಡರ, ಶಶಿಧರ ಉದ್ನೂರ, ಜಯರಾಜ ಡೊಳ್ಳಿ, ಬಸವರಾಜ ಹಟ್ಟಿ, ಸಂಗಪ್ಪ ಗುಡದಾರಿ ಮತ್ತಿತರರು ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030