ದನಹತ್ಯೆ : ಓರ್ವನ ಬಂಧನ
ಗುಳೇದಗುಡ್ಡ: ಪಟ್ಟಣದ ಮೂಕೇಶ್ವರಿ ದ್ವಾರಬಾಗಿಲಿನ ಹತ್ತಿರ ತಗಡಿನ ಶೆಡ್ನಲ್ಲಿ ದನದ ಹತ್ಯೆ ಮಾಡಿದ ಆರೋಪದ ಮೇಲೆ ಒಬ್ಬರನ್ನು ಶುಕ್ರವಾರ ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ.
ಪಟ್ಟಣದ ರಜಂಗಳ ಪೇಟೆಯ ರಾಜಾಸಾಬ ಮಹಿಬೂಬಸಾಬ ಬೇಪಾರಿ ಬಂಧಿತ ಆರೋಪಿಯಾಗಿದ್ದು, ಈತನು ಸರಕಾರದಿಂದಾಗಲಿ ಇಲ್ಲವೇ ಪಶುಸಂಗೋಪನೆ ಇಲಾಖೆಯಿಂದಾಗಲಿ ಪ್ರಾಣಿಗಳ ವಧೆ ಮಾಡಲು ಯಾವುದೇ ಅನುಮತಿ ಇಲ್ಲದೇ ಅನಧಿಕೃತವಾಗಿ ದನವನ್ನು ಆರೋಪಿತನು ಶುಕ್ರವಾರ ಮಧ್ಯಾಹ್ನ 12.30 ಗಂಟೆಯ ಸುಮಾರಿಗೆ ವಧೆ ಮಾಡಿದ್ದಾನೆ. ಹತ್ಯೆ ಮಾಡಿದ ದನದ ಮಾಂಸದ ಖಂಡಗಳು ಸೇರಿ 40 ಕೆ.ಜಿ. ಮಾಂಸ, ದನದ ತಲೆ ಒಡೆದ ಬಗ್ಗೆ ಅದರ ದವಡೆ, ಹಲ್ಲಿನ ಸೆಟ್, ಚರ್ಮದ ತುಂಡುಗಳು, ದನದ ಕೋಡುಗಳು, ಕಬ್ಬಿಣದ ಚಾಕು, ತೂಕದ ಕಲ್ಲುಗಳನ್ನು ಆರೋಪಿತನಿಂದ ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ ಎಂದು ಪಿಎಸ್ಐ ಎಸ್.ಡಿ. ಯಡಹಳ್ಳಿ ತಿಳಿಸಿದ್ದಾರೆ. ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಸಿಪಿಐ ಕೆ.ಡಿ. ಬನ್ನೆ, ಕ್ರೈಂ ಪಿಎಸ್ಐ ಸಗರಿ ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030