ಗಣೇಶನ ಹಬ್ಬಕ್ಕೆ ಮಣ್ಣಿನ ಗಣೇಶ ಮೂರ್ತಿಗಳು
ಪರಿಸರಸ್ನೇಹಿ ಗಣೇಶ ಮೂರ್ತಿಗಳ ತಯಾರಕ ಚಂದ್ರಶೇಖರ ದೊಡಮನಿ
ಗುಳೇದಗುಡ್ಡ : ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಪಟ್ಟಣದ ಎಲ್ಲೆಡೆಯೂ ಗಣೇಶ ಮೂರ್ತಿಗಳ ತಯಾರಿಕೆಯ ಕೊನೆಯ ಹಂತ ಜೋರಾಗಿ ನಡೆಯುತ್ತಿದೆ. ಗುಳೇದಗುಡ್ಡದ ಚಂದ್ರಶೇಖರ ಶಂಕ್ರಪ್ಪ ದೊಡಮನಿ ಅವರ ಕೈ ಚಳಕದಲ್ಲಿ ವಿವಿಧ ಬಗೆ ಬಗೆಯ ಗಣೇಶ ಮೂರ್ತಿಗಳನ್ನು ತಯಾರಿಸಿದ್ದು, ಈಗ ಮನೆ ಮನೆಗಳಲ್ಲಿ , ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆಗೊಳ್ಳಲು ಸಿದ್ದವಾಗುತ್ತಿವೆ.
ಕೋಟ್ :-ಮಣ್ಣಿನ ಮೂರ್ತಿಗಳ ತಯಾರಕ ಚಂದ್ರಶೇಖರ ದೊಡಮನಿ ಹಾಗೂ ಮಣ್ಣಿನ ಗಣೇಶ ಮೂರ್ತಿಗಳು
ಚಂದ್ರಶೇಖರ ಅವರು 13-14 ವರ್ಷಗಳಿಂದ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಗಣೇಶಮೂರ್ತಿಗಳನ್ನು ತಯಾರಿಸುವುದು ಮನೆಯ ಉದ್ಯೋಗವಲ್ಲ, ವಂಶಪರಾಂಪರಿಕವಾಗಿ ಬಂದಿದ್ದಲ್ಲ. ಇವರದು ನೇಕಾರಿಕೆ ಕುಟುಂಬ. ಗಣೇಶ ಮೂರ್ತಿ ತಯಾರಿಕೆಯನ್ನು ಹವ್ಯಾಸ ಮಾಡಿಕೊಂಡು, ಪ್ರತಿವರ್ಷ 150-200 ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ.
ಚಂದ್ರಶೇಖರ ಅವರು ನವಿಲು, ಹಾವು, ನಂದಿ, ಆನೆ, ತಬಲಾ, ತೆಂಗಿನಕಾಯಿ, ಗರುಡ ಮೇಲೆ ಕುಳಿತ ಗಣೇಶ ಮೂರ್ತಿಗಳು, ಯಡಿಯೂರು ಸಿದ್ದಲಿಂಗೇಶ್ವರ ಗಣೇಶ, ಇತ್ತೀಚಗೆ ಚಂದ್ರಯಾನ ಕೈಗೊಂಡ ಚಂದ್ರಾಯನ -3 ಮಾದರಿಯ ಗಣೇಶ, ಹೀಗೆ ಬಗೆ ಬಗೆಯ ವಿವಿಧ ಮಾದರಿ ಗಣೇಶ ಮೂರ್ತಿಗಳನ್ನು ಆಕರ್ಷಕವಾಗಿ ತಯಾರಿಸುತ್ತಾರೆ.
ಗಣೇಶ ಹಬ್ಬ ನಾಲ್ಕೈದು ತಿಂಗಳು ಮೊದಲು ಗಣೇಶ ಮೂರ್ತಿಗಳ ತಯಾರಿಕೆ ಪ್ರಾರಂಭಿಸುತ್ತೇವೆ. ದಿನಕ್ಕೆ ಒಂದ ಗಣೇಶ ಮೂರ್ತಿಯಂತೆ ತಯಾರಿಸುತ್ತೇವೆ. ಗಣೇಶ ಮೂರ್ತಿಗಳ ಬಣ್ಣ ಮಾಡುವಲ್ಲಿ ಗೆಳೆಯರಾದ ಮುತ್ತು ಕಂಠಿ, ಪುಂಡಲೀಕ ಕಂಠಿ, ಈರಣ್ಣ ಹೋಟಿ ಕೈಜೋಡಿಸುತ್ತಾರೆ. ಸಾರ್ವಜನಿಕರು ಪರಿಸರಸ್ನೇಹಿ ಮಣ್ಣಿನ ಮೂರ್ತಿಗಳನ್ನು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಬೇಕು – ಚಂದ್ರಶೇಖರ ದೊಡಮನಿ…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030