ತಪ್ಪಿತಸ್ಥರನ್ನು ಆದಷ್ಟು ಬೇಗ ಬಂಧಿಸಿ: ಬ್ಲಾಕ್ ಕಾಂಗ್ರೆಸ್ ಆಗ್ರಹ…!!!

ತಪ್ಪಿತಸ್ಥರನ್ನು ಆದಷ್ಟು ಬೇಗ ಬಂಧಿಸಿ: ಬ್ಲಾಕ್ ಕಾಂಗ್ರೆಸ್ ಆಗ್ರಹ
ಗುಳೇದಗುಡ್ಡ : ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಮಯದಲ್ಲಿ ಗಲಭೆ, ಅಶಾಂತಿ ಸೃಷ್ಠಿಗೆ ಸಂಚು ಮಾಡಿದ್ದವರನ್ನು ಪೊಲೀಸ್‍ರು ಬಂಧಿಸಿದ್ದಾರೆ. ಅವರ ಜೊತೆಗೆ ಆ ಜನರಿಗೆ ಕುಮ್ಮಕ್ಕು ನೀಡಿದವರನ್ನು ಪತ್ತೆ ಮಾಡಿ, ಕಾನೂನು ಕ್ರಮಜರುಗಿಸಬೇಕೆಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂಜಯ ಬರಗುಂಡಿ ಒತ್ತಾಯಿಸಿದ್ದಾರೆ.
ಅವರು ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗುಳೇದಗುಡ್ಡ ಇತಿಹಾಸದಲ್ಲಿ ಇಂತಹ ಘಟನೆಗಳು ಯಾವತ್ತು ನಡೆದಿಲ್ಲ. ಎಷ್ಟೇ ಚುನಾವಣೆಗಳು ನಡೆದರೂ ಮೂರು ಪಕ್ಷಗಳ ನಾಯಕರು, ಕಾರ್ಯಕರ್ತರು ಚುನಾವಣೆ ಮುಗಿದ ನಂತರ ಗೆಳೆಯರಂತೆ ನಡೆದುಕೊಂಡು ಬಂದಿದ್ದೇವೆ. ಆದರೆ ಈ ಬಾರಿ ಚುನಾವಣೆಯಲ್ಲಿ ಈ ರೀತಿಯ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದು, ನಿಜಕ್ಕೂ ಹೇಯ್ಯ ಕೃತ್ಯವಾಗಿದೆ ಎಂದರು.
ಪಟ್ಟಣದಲ್ಲಿ ಇದೊಂದು ತಲೆತಗ್ಗಿಸುವಂತಹ ಘಟನೆಯಾಗಿದೆ. ಅಶಾಂತಿ ಸೃಷ್ಠಿಗೆ ಸಂಚು ರೂಪಿಸಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಘಟನೆಯ ತನಿಖೆಯಾಗಬೇಕು. ನಾಳೆ ಪಟ್ಟಣದ ಮುಖಂಡರೆಲ್ಲ ಸೇರಿ ಪೊಲೀಸರಿಗೆ ಈ ಬಗ್ಗೆ ದೂರು ಸಲ್ಲಿಸುತ್ತೇವೆ ಎಂದರು.
ಮಾಜಿ ಪುರಸಭೆ ಅಧ್ಯಕ್ಷ ವೈ.ಆರ್.ಹೆಬ್ಬಳ್ಳಿ ಮಾತನಾಡಿ, ಗಲಭೆಗೆ ಯತ್ನಿಸಿದವರ ಮೇಲೆ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಬೇಕು. ಈ ಘಟನೆಯ ಹಿಂದೆ ಷಡ್ಡ್ಯಂತ್ರ ಇದೆ. ಕಾಣದ ಕೈ ಕೆಲಸ ಮಾಡಿದೆ. ಪೊಲೀಸ್ ಇಲಾಖೆಯವರು ಆದಷ್ಟು ಬೇಗ ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗೋಪಾಲ ಭಟ್ಟಡ, ಮುಬಾರಕ ಮಂಗಳೂರ, ಮೂಕಪ್ಪ ಹುನ್ನೂರ, ಫಕೀರಪ್ಪ ತಳವಾರ, ರಾಜು ಸಂಗಮ, ಯಲಗುರ್ದಪ್ಪ ಗೌಡರ, ಬಸವರಾಜ ದಳವಾಯಿ, ಶ್ರೀಕಾಂತ ಗಡೇದ, ವೈ.ಬಿ.ಗೌಡರ ಸೇರಿದಂತೆ ಇನ್ನುಳಿದವರು ಇದ್ದರು…

ವರದಿ. ಸಚಿನ್ ಬಾಗಲಕೋಟ

Leave a Reply

Your email address will not be published. Required fields are marked *