ಮುರುಡಿ: ಅಗಸಿಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ ಭೀಮಸೇನ ಚಿಮ್ಮನಕಟ್ಟಿ..
ಗುಳೇದಗುಡ್ಡ: ಮುರುಡಿ ಗ್ರಾಮದಲ್ಲಿ ಅಗಸಿ ಬಾಗಿಲು ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಗ್ರಾಮದಲ್ಲಿ ಅಗಸಿ ಬಾಗಿಲು ನಿರ್ಮಾಣ ಕಾಮಗಾರಿಗೆ ಸಿ.ಎಂ. ಸಿದ್ದರಾಮಯ್ಯನವರು 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಹಂತ ಹಂತವಾಗಿ ಅನುದಾನ ತರುವ ಮೂಲಕ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಸಮೀಪದ ಮುರುಡಿ ಗ್ರಾಮದಲ್ಲಿ ಜಿಲ್ಲಾಪಂಚಾಯತ, ತಾಲೂಕು ಪಂಚಾಯತಿ, ಗ್ರಾಮೀಣಾಭಿವೃದ್ಧಿ ಮತ್ತು ರಾಜ್ಯ ಇಲಾಖೆ 2021-22ನೇ ಸಾಲಿನ ಪ್ರಧಾನಮಂತ್ರಿ ಆದಿ ಆದರ್ಶ ಗ್ರಾಮಯೋಜನೆಯಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪಂಗಡ ಅಗಸಿಬಾಗಿಲು ನಿರ್ಮಾಣ, 2 ಲಕ್ಷ ರೂ ವೆಚ್ಚದಲ್ಲಿ ಬೋರ್ವೆಲ್ಗೆ ವಿದ್ಯುತ್ ಸಂಪರ್ಕ, ಮೋಟರ್ ಅಳವಡಿಸುವುದು, 5 ಲಕ್ಷ.ರೂ.ವೆಚ್ಚದಲ್ಲಿ ಟ್ಯಾಂಕ್ ರಿಪೇರಿ ಕಾಮಗಾರಿ, 3 ಲಕ್ಷ ರೂ ವೆಚ್ಚದಲ್ಲಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ರಂಗಮಂದಿರದ ಕಾಮಗಾರಿ ಸೇರಿದಂತೆ ಗ್ರಾಮದಲ್ಲಿ ಒಟ್ಟು 20 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ನನ್ನ ಅಧಿಕಾರಾವಧಿಯಲ್ಲಿ ಶ್ರಮಿಸುತ್ತನೆ ಎಂದರು.
ಈ ಸಂದರ್ಭಲ್ಲಿ ಗ್ರಾಪಂ ಅಧ್ಯಕ್ಷ ಜಗದೀಶ ಹಿರೇಗೌಡರ, ವೈ.ಬಿ.ಗೌಡರ, ಪಾಂಡು ದಾಸರ, ಪಿಡಿಓ ಎಸ್.ಬಿ. ಅಂಕೋಲೆ, ಎಇಇ ಎ.ಎಸ್.ತೋಪಲಕಟ್ಟಿ, ಪರಸಪ್ಪ ಹೊಸಮನಿ, ಗ್ರಾಪಂ ಪರಸಪ್ಪ ಮಾದರ, ಪಕೀರಪ್ಪ ತಳವಾರ, ರಾಮಣ್ಣ ನೀರಲಕೇರಿ, ರಾಮಣ್ಣ ಗೌಡ್ರ, ಬಸವರಾಜ ದಳವಾಯಿ, ಭರಮಪ್ಪ ಗೌಡರ, ಪ್ರಮೋದ ಗೌಡರ, ಪ್ರಕಾಶ ಹೊಸಕೋಟಿ, ಮಂಜು ಪಾಟೀಲ, ಪುಂಡಲೀಕ ಲಮಾಣಿ ಮತ್ತಿತರರು ಇದ್ದರು…
ವರದಿ, ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030