ಶಾಂತಿ ಸೌಹಾರ್ದತೆಯಿಂದ ಗಣೇಶೋತ್ಸವ ಆಚರಿಸಿ: ಡಿವೈಎಸ್‍ಪಿ ಕುಲಕರ್ಣಿ
ಗುಳೇದಗುಡ್ಡ: ಗಣೇಶ ಚತುರ್ಥಿ ಹಬ್ಬವನ್ನು ನಗರದಲ್ಲಿ ಎಲ್ಲರೂ ಶಾಂತಿ ಸೌಹಾರ್ದಯುತವಾಗಿ ಆಚರಿಸಬೇಕು. ಸಾರ್ವಜನಿಕ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಂಡಳಿಗಳು ಸರಕಾರದ ನಿಯಮ ಪಾಲನೆ ಮಾಡಬೇಕು. ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಒಬ್ಬಿಬ್ಬರು ಆಯೋಜಕರು ಹಗಲು ರಾತ್ರಿ ಇರಬೇಕು. ರಾತ್ರಿ ಹತ್ತು ಗಂಟೆಯೊಳಗೆ ಮೂರ್ತಿಯನ್ನು ವಿಸರ್ಜನೆ ಮಾಡಬೇಕು. ಮೆರವಣಿಗೆಯಲ್ಲಿ ಹೆಚ್ಚು ಶಬ್ದಕ್ಕೆ ಅವಕಾಶ ನೀಡಬಾರದು. ಅಹಿತಕರ ಘಟನೆಗಳು ನಡೆದರೆ ಗಣೇಶ ಮಂಡಳಿಗಳ ಆಯೋಜಕರು ಹೊಣೆಗಾರರಾಗುತ್ತಾರೆ ಎಂದು ಡಿವೈಎಸ್‍ಪಿ ವಿಶ್ವನಾಥರಾವ ಕುಲಕರ್ಣಿ ಹೇಳಿದರು.
ಅವರು ರವಿವಾರ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಗಣೇಶ ಹಬ್ಬದ ಅಂಗವಾಗಿ ಕರೆಯಲಾಗಿದ್ದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕ ಗಣೇಶ ಮಂಡಳಿಗಳು ಗಣೇಶ ಪ್ರತಿಷ್ಠಾಪನೆಗೆ ಪುರಸಭೆ, ಕೆಇಬಿ, ಪೋಲಿಸ್ ಇಲಾಖೆಯಿಂದ ಕಡ್ಡಾಯವಾಗಿ ಪರವಾಣಿಗೆ ಪಡಬೇಕು. ಗಣೇಶ ಉತ್ಸವ ಸಂದರ್ಭದಲ್ಲಿ ಸಾರ್ವಜನಿಕರು, ಗಣೇಶ ಮಂಡಳಿಗಳು ಪೋಲಿಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕು. ನಾವು ನಿಮ್ಮ ಜೊತೆ ನಾವಿದ್ದೇವೆ. ಗಣೇಶ ಹಬ್ಬವನ್ನು ಶಾಂತಿ ಸೌಹಾರ್ಧತೆಯಿಂದ ಆಚರಿಸೋಣ ಎಂದರು.
ಈ ಸಂದರ್ಭದಲ್ಲಿ ಸಿಪಿಐ ಕರಿಯಪ್ಪ ಬನ್ನೆ, ಪಿಎಸ್‍ಐ ಸಿದ್ದಪ್ಪ ಯಡಹಳ್ಳಿ, ಪುರಸಭೆ ಮ್ಯಾನೇಜರ ಎ.ಎಚ್. ಮುದ್ದೇಬಿಹಾಳ, ರಾಜು ತಾಪಡಿಯಾ, ಜಮೀರ ಮೌಲ್ವಿ, ಮಹೇಶ ಸೂಳಿಭಾವಿ, ಭುವನೇಶ ಪೂಜಾರಿ, ರಾಜು ಸಂಗಮ, ರೆಡ್ಡಿ ನಡುವಿನಮನಿ, ಶಿವಕುಮಾರ ಬಾದವಾಡಗಿ, ಗಣೇಶ ಮಂಡಳಿಯವರು, ಪೆಂಡಾಲ ಮಾಲೀಕರು, ಸಾರ್ವಜನಿಕರು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030