ಶರಣ ನೂಲಿ ಚಂದಯ್ಯನವರ ವಚನಗಳು ಸಮಾಜಕ್ಕೆ ಮಾರ್ಗದರ್ಶಕ
ಗುಳೇದಗುಡ್ಡ : ನೂಲಿ ಚಂದಯ್ಯನವರು 12ನೇ ಶತಮಾನದ ಬಸವಾದಿ ಶರಣರ ಸಮಕಾಲೀನರಾಗಿದ್ದ ಚಂದಯ್ಯ ಅವರು ಬಸವಣ್ಣನವರ ವಿಚಾರಧಾರೆಯಿಂದ ಪ್ರಭಾವಿತರಾಗಿ ಕಲ್ಯಾಣದ ಅನುಭವ ಮಂಟಪಕ್ಕೆ ಬಂದರು. ನೂಲಿ ಚಂದಯ್ಯನವರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಕಾರ್ಯಮಾಡಿದ್ದಾರೆ ಎಂದು ತಹಶೀಲ್ದಾರ ಮಂಗಳಾ ಎಂ. ಹೇಳಿದರು.
ಅವರು ಸೋಮವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಶರಣ ನೂಲಿ ಚಂದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ, ಶರಣ ನೂಲಿಚಂದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಸಮಾಜ ಭಾಂದವರು ಮೂಲ ವೃತ್ತಿ ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ಅಖಿಲ ಕರ್ನಾಟಕ ಕುಳುವ ಮಹಾಸಂಘದ ತಾಲೂಕು ಅಧ್ಯಕ್ಷ ಶ್ಯಾಮಸುಂದರ ಕೊರವರ ಮಾತನಾಡಿ, ವಿಜಯಪುರ ಜಿಲ್ಲೆಯ ಶಿವಣಗಿಯಲ್ಲಿ ಜನಿಸಿದ ಚಂದಯ್ಯನವರು ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದವರಲ್ಲಿ ಶರಣ ನೂಲಿಯ ಚಂದಯ್ಯನವರೂ ಒಬ್ಬರು.. ಸಮಾಜದಲ್ಲಿ ಬೇರೂರಿದ್ದ ಅಸಮಾನತೆ ಹೋಗಲಾಡಿಸಲು ಶರಣ ನೂಲಿ ಚಂದಯ್ಯನವರು ಶ್ರಮಿಸಿದ್ದಾರೆ. ಎಲ್ಲರೂ ಸಮಾನರು ಎಂಬುದನ್ನು ಸಾರುವುದೇ ನುಲಿಯ ಚಂದಯ್ಯನವರ ಆದರ್ಶಗಳಾಗಿದ್ದವು ಎಂದರು.
ಈ ಸಂದರ್ಭಲ್ಲಿ ಪುರಸಭೆ ಸದಸ್ಯ ಯಲ್ಲಪ್ಪ ಮನ್ನಿಕಟ್ಟಿ, ಶಂಕರ ಭಜಂತ್ರಿ, ವೀರಭದ್ರಪ್ಪ ಭಜಂತ್ರಿ, ಭೀಮಶಿ ಭಜಂತ್ರಿ, ಮಹಾಂತೇಶ ಭಜಂತ್ರಿ, ತಮ್ಮಣ್ಣೆಪ್ಪ ಭಜಂತ್ರಿ, ಯಮನಪ್ಪ ಭಜಂತ್ರಿ, ರುದ್ರೇಶ ಭಜಂತ್ರಿ, ಗುರು ಭಜಂತ್ರಿ, ಪರಸಪ್ಪ ಭಜಂತ್ರಿ, ಫಕೀರಪ್ಪ ತಳವಾರ ಮತ್ತಿತರ ಸಮಾಜಬಾಂಧವರು ಇದ್ದರು….
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030